Advertisement

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

12:36 AM Oct 26, 2021 | Team Udayavani |

ರಾಯ್‌ಪುರ: ಬಿಸಿಯೂಟದ ದಿನಸಿಗಾಗಿ ಶಿಕ್ಷಕರು ನಡೆಯಬೇಕಾಗಿದೆ ಎಂಟು ಕಿ.ಮೀ.!

Advertisement

ಛತ್ತೀಸ್‌ಗಢದ ಬಲರಾಮಪುರ ಜಿಲ್ಲೆಯ ಖಡಿಯಾ ಗ್ರಾಮದಲ್ಲಿ ಶಾಲೆಯ ಶಿಕ್ಷಕರ ದುರವಸ್ಥೆ ಇದು. ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದೇ ಇರುವ ಕಾರಣ ಸರಕಾರಿ ಶಾಲೆಯ ಶಿಕ್ಷಕರಾಗಿರುವ ಸುಶಿಲ್‌ ಯಾದವ್‌ ಮತ್ತು ಪಂಕಜ್‌ ಅವರು ಎಂಟು ಕಿ.ಮೀ. ದೂರದಲ್ಲಿರುವ ಬಲರಾಮಪುರಕ್ಕೆ ತೆರಳಬೇಕಾಗಿದೆ.

ಗುಡ್ಡ, ಹಳ್ಳಗಳನ್ನೆಲ್ಲ ದಾಟಿ ದಿನಸಿ ತರಬೇಕು. ಊರಿಗೆ ಸೂಕ್ತ ರಸ್ತೆ ನಿರ್ಮಾಣ ಮಾಡಬೇಕೆಂದು ಶಿಕ್ಷಕರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಶಿಕ್ಷಣಾಧಿಕಾರಿ ಬಿ.ಎಕ್ಕಾ ತಿಳಿಸಿದ್ದಾರೆ.

ಇಷ್ಟಾದರೂ ಶಿಕ್ಷಕರು ತಮ್ಮ ಸ್ವಂತ ಹಣದಿಂದ, ಸಂಘ ಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ಹಣ ಹಾಗೂ ದಿನಸಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದಾರೆ.

ಇದನ್ನೂ ಓದಿ:ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

Advertisement

ಮಕ್ಕಳು ಹಸಿದುಕೊಂಡು ಪಾಠ ಕೇಳಬಾರದು ಎಂಬ ಶಿಕ್ಷಕರ ಕಳಕಳಿ ಅದು. ಈ ನಡುವೆ, ಛತ್ತೀಸ್‌ಗಡದ ಶಿಕ್ಷಕರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರ ಸಾಹಸ ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next