ಈ ಬಗ್ಗೆ ಮಾತನಾಡಿರುವ ಭಾರತೀಯ ಚೆಸ್ ಆಡಳಿತ ಮಂಡಳಿಯ (ಎಐಸಿಎಫ್) ಕಾರ್ಯದರ್ಶಿ ದೇವ್ ಪಟೇಲ್, ಇದರ ಕುರಿತು ವಿಶ್ವ ಚೆಸ್ ಆಡಳಿತ ಮಂಡಳಿ (ಫಿಡೆ) ಜತೆಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್ ನಡೆದರೆ ಉತ್ತಮ ಎಂದಿದ್ದಾರೆ.
Advertisement
ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗೆ ಫಿಡೆ ಇನ್ನೂ ದಿನಾಂಕ, ತಾಣವನ್ನು ಘೋಷಿಸಿಲ್ಲ. ಈ ವರ್ಷ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಟೂರ್ನಿ ನಡೆಯುವ ನಿರೀಕ್ಷೆಯಿದೆ. ಟೂರ್ನಿ ಆಯೋಜಿಸಲು ಆಸಕ್ತರು ಬಿಡ್ಡಿಂಗ್ ಸಲ್ಲಿಸಲು, ಮೇ 31ರಂದು ಕಡೇ ದಿನವಾಗಿರಲಿದೆ.
ವಿಶ್ವ ಚೆಸ್ ಚಾಂಪಿಯನ್‌ಶಿಪ್ 25 ದಿನ ನಡೆಯುವ ಟೂರ್ನಿ. ಇದಕ್ಕೆ 70 ಕೋ.ರೂ. ನಷ್ಟು ವೆಚ್ಚ ತಗಲುತ್ತದೆ. ಇದರಲ್ಲಿ 9 ಕೋಟಿ ರೂ.ನಷ್ಟು ಹಣ ಫಿಡೆ ನೀಡುತ್ತದೆ. ಪ್ರಸ್ತುತ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಗುಕೇಶ್, ಹಾಲಿ ವಿಶ್ವ ಚಾಂಪಿಯನ್ ಚೀನದ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ. ಗುಕೇಶ್‌ಗೆ 75 ಲಕ್ಷ ರೂ.
ಕ್ಯಾಂಡಿಡೇಟ್ಸ್ ಗೆದ್ದು 78 ಲಕ್ಷ ರೂ. ಪಡೆದಿರುವ ಡಿ. ಗುಕೇಶ್‌ಗೆ ರವಿವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 75 ಲಕ್ಷ ರೂ. ಚೆಕ್ ನೀಡಿದರು.