Advertisement

ದುರಸ್ತಿ ವೇಳೆ ಚಾರ್‌‌ ಮಿನಾರ್‌ನ ಕೆತ್ತನೆಯ ಒಂದು ಭಾಗ ಕುಸಿತ

10:07 AM May 03, 2019 | Team Udayavani |

ಹೈದರಾಬಾದ್‌: ಹೈದರಾಬಾದ್‌ ಹಳೆ ನಗರದಲ್ಲಿದರುವ 16 ನೇ ಶತಮಾನದ ಸ್ಮಾರಕ ಚಾರ್‌ ಮಿನಾರ್‌ನ ಭಾಗವೊಂದು ಬುಧವಾರ ರಾತ್ರಿ ಕುಸಿದು ಬಿದ್ದಿದೆ.

Advertisement

ರಾತ್ರಿ ಪ್ರವಾಸಿಗರು ನೋಡುತ್ತಿದ್ದಂತೆ ಕೆತ್ತನೆಯ ಒಂದು ಭಾಗ ಕುಸಿದು ಬಿದ್ದಿದೆ. ಸ್ಥಳದಲ್ಲಿದ್ದ ಪೊಲೀಸರು ಕುತೂಹಲಿಗರಾಗಿದ್ದ ಪ್ರವಾಸಿಗರನ್ನುಸ್ಥಳದಿಂದ ತೆರವುಗೊಳಿಸಿದರು.

ದುರಸ್ತಿ ನಡೆಸುತ್ತಿದ್ದಾಗಲೇ ಕೆತ್ತನೆಯ ಭಾಗವೊಂದು ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಭಾರತದ ಪುರಾತತ್ವ ಸಮೀಕ್ಷೆ ಅಧಿಕಾರಿಗಳು ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡಿದ್ದರು.ಇದೀಗ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next