ಬ್ರಹ್ಮಾವರ: ಚೇರ್ಕಾಡಿ ಶಾರದಾ ಪ್ರೌಢಶಾಲೆಯ ಎಲ್ಲಾ 172 ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನೊಂದಿಗೆ ಸುಮಾರು ರೂ.70,000 ವೆಚ್ಚದಲ್ಲಿ ಉಚಿತವಾಗಿ ಸಮವಸ್ತ್ರ ವಿತರಿಸಲಾಯಿತು.
ಶಾಲಾಡಳಿತ ಮಂಡಳಿಯ ಸದಸ್ಯ ಬೆಂಗಳೂರಿನ ಕೈಗಾರಿಕೋದ್ಯಮಿ ಸಿ.ಎ. ಶಶಿಧರ್ ಶೆಟ್ಟಿ ಮುಡೂರು, ಆಡಳಿತ ಮಂಡಳಿಯ ಸದಸ್ಯ ಬೆಂಗಳೂರಿನ ಉದ್ಯಮಿ ಮುರಳೀಧರ ಹೆಗ್ಡೆ ಮೊದಲ್ತಾವು ಹಾಗೂ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯೆ ದಮಯಂತಿ ಭಟ್ ನೀಲಾವರ ಅವರು ಪ್ರಾಯೋಜಕತ್ವ ವಹಿಸಿದ್ದರು.
ಅಧ್ಯಕ್ಷತೆಯನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷ ರಾಜೀವ ಆಳ್ವ ಅವರು ವಹಿಸಿದ್ದರು. ಅತಿಥಿಗಳಾಗಿ ಚೇರ್ಕಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ, ಶಾಲಾಡಳಿತ ಮಂಡಳಿಯ ಕೋಶಾಧಿ ಕಾರಿ ಆರೂರು ತಿಮ್ಮಪ್ಪ ಶೆಟ್ಟಿ, ಸದಸ್ಯರಾದ ಎಚ್.ಶಶಿಧರ್ ಶೆಟ್ಟಿ ಹಿರಿಯಡ್ಕ, ಎಚ್.ಕೆ.ನಾಯ್ಕ ಹುತ್ತಿ ಚೇರ್ಕಾಡಿ ಉಪಸ್ಥಿತರಿದ್ದರು.
ಶಾಲಾಡಳಿತ ಮಂಡಳಿಯ ಸದಸ್ಯ ಪಿ.ರವೀಂದ್ರನಾಥ ಜಿ. ಹೆಗ್ಡೆ ಪಡುಬಿದ್ರಿ ಅವರು ಪ್ರಾಯೋಜಿಸಿರುವ ಶಾಲಾ ಕೈಪಿಡಿಯನ್ನು ಸಿ.ಎ. ಶಶಿಧರ್ ಶೆಟ್ಟಿ ಅವರು ಬಿಡುಗಡೆಗೊಳಿಸಿದರು. ಎನ್‌ಎಂಎಂಎಸ್ ಪರಿಕ್ಷೆಯಲ್ಲಿ ಉತ್ತೀರ್ಣ ವಿದ್ಯಾರ್ಥಿಗಳಾದ ಪ್ರಜ್ವಲ್ ನಾಯ್ಕ ಮತ್ತು ಚೆ„ತ್ರಾ ಅವರಿಗೆ ಪ್ರಶಸ್ತಿ ಪತ್ರ ವಿತರಿಸಿ ಅಭಿನಂದಿಸಲಾಯಿತು.
ಮುಖ್ಯೋಪಾಧ್ಯಾಯರಾದ ಸಿ. ಮಂಜುನಾಥ ನಾಯ್ಕ ಸ್ವಾಗತಿಸಿದರು. ಶಿಕ್ಷಕಿಯರಾದ ಮಮತಾ ಶೆಟ್ಟಿ ಬಹುಮಾನಿತರ ಪಟ್ಟಿ ವಾಚಿಸಿ, ರೇವತಿ ಎಸ್. ವಂದಿಸಿದರು. ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.