Advertisement

Chandrayaan-3; ಜುಲೈ 14ರಂದು ಚಂದ್ರಯಾನ-3 ಗಗನ ನೌಕೆ ಉಡಾವಣೆ: ಇಸ್ರೋ

06:16 PM Jul 06, 2023 | Team Udayavani |

ಶ್ರೀಹರಿಕೋಟ: ಬಹುನಿರೀಕ್ಷಿತ ಚಂದ್ರಯಾನ-3 ನೌಕೆಯ ಉಡಾವಣೆ ದಿನಾಂಕವನ್ನು ಮುಂದೂಡಿರುವುದಾಗಿ ಇಸ್ರೋ ಗುರುವಾರ (ಜುಲೈ 06) ತಿಳಿಸಿದ್ದು, ಚಂದ್ರಯಾನ 3 ನೌಕೆ ಜುಲೈ 14ರಂದು ಉಡಾವಣೆ ಮಾಡುವುದಾಗಿ ಮಾಹಿತಿ ನೀಡಿದೆ.

Advertisement

ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಕಾಶ ಕೇಂದ್ರದಿಂದ ಜಿಎಸ್‌ ಎಲ್‌ ವಿಎಂಕೆ ಸೆಟಲೈಟ್ ಚಂದ್ರಯಾನ-3 ನೌಕೆಯನ್ನು ಮಧ್ಯಾಹ್ನ 2.35ಕ್ಕೆ ಹೊತ್ತೊಯ್ಯಲಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರಯಾನ-3 ನೌಕೆಯನ್ನು ಜು.13ರಂದು ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುದು ಎಂದು ಈ ಮೊದಲು ತಿಳಿಸಿತ್ತು.

ಚಂದ್ರಯಾನ-3 ನೌಕೆಯನ್ನು ಉಡಾಯಿಸುವ ಅವಕಾಶ ಜುಲೈ 19ರವರೆಗೂ ಇದ್ದು, ಒಂದು ವೇಳೆ ನಿಗದಿಪಡಿಸಿದ ದಿನಾಂಕದಂದು ಚಂದ್ರಯಾನ-3 ನೌಕೆಯನ್ನು ಉಡಾಯಿಸಲು ಸಾಧ್ಯವಾಗದಿದ್ದಲ್ಲಿ, 19ರವರೆಗೂ ಅವಕಾಶ ಇರುವುದಾಗಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಾರಿ ಚಂದ್ರಯಾನ-3 ನೌಕೆ ಈ ಬಾರಿ ಚಂದ್ರನ ಅಂಗಳವನ್ನು ಸುಗಮವಾಗಿ ತಲುಪುವ ನಿರೀಕ್ಷೆ ಇದ್ದಿರುವುದಾಗಿ ಸೋಮನಾಥ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2019ರ ಸೆಪ್ಟೆಂಬರ್‌ ನಲ್ಲಿ ನಡೆದಿದ್ದ ಚಂದ್ರಯಾನ-2 ವೈಫಲ್ಯ ಕಂಡಿತ್ತು. ಈ ಹಿನ್ನೆಲೆಯಲ್ಲಿ ಲ್ಯಾಡರ್‌ ನಲ್ಲಿ ಇಸ್ರೋ ಹಲವು ಬದಲಾವಣೆ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next