Advertisement
ಅಚ್ಚರಿಯ ಏರಿಳಿತಚಂದ್ರನ ಮೇಲ್ಮೆ„ಯಲ್ಲಿ ಕಂಡು ಬಂದಿರುವ ಭಾರೀ ತಾಪಮಾನ ವ್ಯತ್ಯಾಸದ ಬಗ್ಗೆ ಇಸ್ರೋ ವಿಜ್ಞಾನಿಗಳು ಆಶ್ಚರ್ಯ ಸೂಚಿಸಿದ್ದಾರೆ. ಮೇಲ್ಮೆ„ಯಲ್ಲಿ 20 ಡಿಗ್ರಿ ಸೆ.ನಿಂದ 30 ಡಿಗ್ರಿ ಸೆ. ವರೆಗೆ ತಾಪಮಾನ ಇರಬಹುದು ಎಂದು ಭಾವಿಸಲಾಗಿತ್ತು. ಆದರೆ 70 ಡಿಗ್ರಿ ಸೆ.ವರೆಗೂ ತಾಪ ಇರುವುದು ಅಚ್ಚರಿಯೇ ಸರಿ ಎಂದು ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ ತಿಳಿಸಿದ್ದಾರೆ. ಭೂಮಿಯಲ್ಲಿ 2-3 ಸೆಂ.ಮೀ. ಆಳಕ್ಕೆ ಹೋದರೆ 2ರಿಂದ 3 ಡಿಗ್ರಿ ಸೆ. ವರೆಗಷ್ಟೇ ವ್ಯತ್ಯಾಸ ಕಂಡುಬರುತ್ತದೆ. ಆದರೆ ಚಂದ್ರನಲ್ಲಿ ಇಷ್ಟೇ ಆಳದಲ್ಲಿ 50 ಡಿಗ್ರಿ ಸೆ. ವರೆಗೆ ವ್ಯತ್ಯಾಸ ಕಂಡುಬಂದಿದೆ. ಇದು ಕುತೂಹಲಕಾರಿ ಎಂದು ಅವರು ತಿಳಿಸಿದ್ದಾರೆ. ಚಂದ್ರನ ಮೇಲ್ಮೆ„ಯ 10 ಸೆಂ. ಮೀ. ಆಳದಲ್ಲಿ ತಾಪ ಮೈನಸ್ 10 ಡಿಗ್ರಿ ಸೆ. ಇದ್ದರೆ ಮೇಲ್ಮೆ„ಯಲ್ಲಿ 70 ಡಿಗ್ರಿ ಸೆ. ಇದೆ; ವ್ಯತ್ಯಾಸ 70 ಡಿಗ್ರಿ ಸೆ.ಯಿಂದ ಮೈನಸ್ 10 ಡಿಗ್ರಿ ಸೆ. ವರೆಗೆ ಇರುವುದು ಅಚ್ಚರಿ ಮೂಡಿಸಿದೆ ಎಂದು ದಾರುಕೇಶ ತಿಳಿಸಿದ್ದಾರೆ.
ಅಧ್ಯಯನ ಇತಿಹಾಸದಲ್ಲಿಯೇ
ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದದ್ದು ಭಾರತದ ಮೊದಲ ಸಾಧನೆಯಾದರೆ, ಅಲ್ಲಿನ ತಾಪಮಾನದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಮತ್ತೂಂದು ದಾಖಲೆ. ಇದೇ ಮೊದಲ ಬಾರಿಗೆ ತಾಪ ವ್ಯತ್ಯಾಸದ ಮಾಹಿತಿ ಸಂಗ್ರಹಿಸಿ ಇಸ್ರೋ ಇತಿಹಾಸ ನಿರ್ಮಿಸಿದೆ. ಗ್ರಾಫ್ನಲ್ಲಿ ಏನಿದೆ?
ಪ್ರಗ್ಯಾನ್ ಕಳುಹಿಸಿಕೊಟ್ಟಿರುವ ಚಂದ್ರನ ಮೇಲ್ಮೆ„ಯ ತಾಪಮಾನ ವ್ಯತ್ಯಾಸದ ಗ್ರಾಫ್ನಲ್ಲಿ ದಕ್ಷಿಣ ಧ್ರುವದಲ್ಲಿ ತಾಪಮಾನ ಮೈನಸ್ 10ರಿಂದ ದಾಖಲೆಯ 70 ಡಿಗ್ರಿ ಸೆಲಿÏಯಸ್ ವರೆಗೆ ವ್ಯತ್ಯಾಸ ಹೊಂದಿರುವುದು ದಾಖಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಂದ್ರನ ಮೇಲ್ಮೆ„ ಭಾಗದ ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬರುವ ಸಾಧ್ಯತೆಗಳು ಇವೆ.
Related Articles
Advertisement