Advertisement

ಶೋಷಿತರಲ್ಲಿ ಜಾಗೃತಿ ಮೂಡಿಸಲು ಚಿತ್ರ ನಿರ್ಮಾಣ

05:09 PM Jun 13, 2020 | Naveen |

ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಶೋಷಿತ ಸಮುದಾಯದ ಮೇಲೆ ನಡೆಯುತ್ತಿರುವ ಶೋಷಣೆ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಚಲಚಿತ್ರ ವೊಂದನ್ನು ಸಿದ್ಧಪಡಿಸುತ್ತಿದ್ದು, ಚಿತ್ರದ ಚಿತ್ರೀಕರಣವನ್ನು ಚಳ್ಳಕೆರೆ ನಗರದಲ್ಲಿ ನಡೆಸಲಾಗುವುದು ಎಂದು ಚಿತ್ರದ ನಿರ್ದೇಶಕ ಅರುಣ್‌ ರೈನಾ ತಿಳಿಸಿದರು.

Advertisement

ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಚಲನಚಿತ್ರ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಲಿದ್ದು, ಚಿತ್ರಕ್ಕೆ ಸದ್ಯ ಪ್ರೊಡಕ್ಷನ್‌ ನಂ-1 ಎಂದು ಹೆಸರಿಡಲಾಗಿದೆ. ಹೆಚ್ಚಾಗಿ ಗುಡಿಸಲುಗಳಲ್ಲಿ ವಾಸವಿರುವ ಜನರ ಸಮಸ್ಯೆಗಳನ್ನು ಆದ್ಯತೆ ಯಾಗಿಟ್ಟುಕೊಂಡು ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ. ಅಭಿಷೇಕ್‌ ನಗರ ಮತ್ತು ಮೈರಾಡ ಕಾಲೋನಿಯಲ್ಲಿ ಚಿತ್ರದ ಶೂಟಿಂಗ್‌ ನಡೆಯಲಿದ್ದು, ಲೋಕೇಷನ್‌ ನೋಡಲು ತಂಡ ಚಳ್ಳಕೆರೆಗೆ ಆಗಮಿಸಿದೆ ಎಂದರು.

ಚಲನಚಿತ್ರದ ನಾಯಕ ನಟ ರಾಕೇಶ್‌ ದಳವಾಯಿ, ಸಹನಟರಾದ ದೀಪಕ್‌ ರಾಯ್‌, ಪ್ರವೀಣ್‌ ಕುಮಾರ್‌, ಛಾಯಾಗ್ರಾಹಕ ಪ್ರಶಾಂತ್‌, ವಿಜಯಕುಮಾರ್‌, ರುದ್ರಮುನಿ, ದೇವಿಪುತ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next