Advertisement

BBK11: ಬಿಗ್‌ಬಾಸ್‌ ಮನೆಯಿಂದ ಆಚೆ ಬಂದ ಚೈತ್ರಾ ಕುಂದಾಪುರ.! ಕಾರಣವೇನು?

01:38 PM Dec 03, 2024 | Team Udayavani |

ಬೆಂಗಳೂರು: ಬಿಗ್‌ಬಾಸ್‌ (Bigg Boss Kannada-11) ಮನೆಯಿಂದ ಚೈತ್ರಾ ಕುಂದಾಪುರ (Chaitra Kundapura) ಹೊರಗೆ ಬಂದಿದ್ದಾರೆ.!

Advertisement

ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಶೋಭಾ ಶೆಟ್ಟಿ ಅವರು ಅರ್ಧದಲ್ಲೇ ಆಚೆ ಬಂದಿದ್ದರು. ಅನಾರೋಗ್ಯ ಕಾರಣ ಕೊಟ್ಟ ಸ್ವತಃ ತಾವೇ ಆಚೆ ಹೋಗುವುದಾಗಿ ಶೋಭಾ ಹೇಳಿದ್ದರು. ಇದಕ್ಕೆ ಬಿಗ್‌ ಬಾಸ್‌ ಅನುಮತಿ ಕೊಟ್ಟಿದ್ದು, ಈಗಾಗಲೇ ಶೋಭಾ ಅವರು ಆಚೆ ಬಂದಿದ್ದಾರೆ.

ವಿವಾದದಿಂದಲೇ ಸುದ್ದಿಯಾಗಿರುವ ಚೈತ್ರಾ ಕುಂದಾಪುರ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ನೀಡುತ್ತೇನೆ ಎಂದು ವಂಚನೆ ಮಾಡಿದ್ದರು ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ.

ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ. ಪಡೆದು ವಂಚಿಸಿದ್ದರು ಎನ್ನುವ ಆರೋಪದಲ್ಲಿ ಚೈತ್ರಾ ಜೈಲು ಸೇರಿ ಆ ಬಳಿಕ ಜಾಮೀನು ಪಡೆದು ಆಚೆ ಬಂದಿದ್ದರು. ಈ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿತ್ತು.

ಇದಾದ ಬಳಿಕ ಚೈತ್ರಾ ಅವರು ಕೆಲ ದಿನ ಸುದ್ದಿಯಲ್ಲಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ಬಿಗ್‌ ಬಾಸ್‌ ಕನ್ನಡ ಕಡೆಯಿಂದ ಆಫರ್‌ ಬಂದಿತ್ತು. ಬಿಗ್‌ ಬಾಸ್‌ ಮನೆಗೆ ಹೋಗಿರುವ ಚೈತ್ರಾ ಅಲ್ಲೂ ಕೂಡ ತನ್ನ ದೊಡ್ಡ ಧ್ವನಿಯಿಂದಲೇ ಸದ್ದು ಮಾಡಿದ್ದಾರೆ.

Advertisement

ಟಿಕೆಟ್‌ ವಂಚನೆ ಸಂಬಂಧ ಪ್ರಕರಣ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಚೈತ್ರಾ ಸೇರಿದಂತೆ ಶ್ರೀಕಾಂತ್, ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಸ್ವಾಮೀಜಿಯ ಹೆಸರು ಕೂಡ ಕೇಳಿ ಬಂದಿತ್ತು.

ಇತ್ತೀಚೆಗೆ ವಿಚಾರಣೆಗೆ ಹಾಜರಾಗಬೇಕೆನ್ನುವ ವಾರೆಂಟ್‌ ಬಂದಿತ್ತು. ಈ ಕಾರಣದಿಂದ ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರ ನೇರವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ.

ಸದ್ಯ ವಿಚಾರಣೆಯನ್ನು ಕೋರ್ಟ್‌ ಜನವರಿ 13ಕ್ಕೆ ಮುಂದೂಡಿದೆ. ಚೈತ್ರಾ ಅವರು ವಿಚಾರಣೆ ವೇಳೆ ಯಾರೊಂದಿಗೂ ಮಾತನಾಡಿಲ್ಲ ಎನ್ನಲಾಗಿದ್ದು, ಅಲ್ಲಿಂದ ಅವರು ನೇರವಾಗಿ ಬಿಗ್‌ ಬಾಸ್‌ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ.

ಕಳೆದ ಸೀಸನ್‌ನಲ್ಲಿ ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ವರ್ತೂರು ಸಂತೋಷ್‌ ಅವರು ಜೈಲಿಗೆ ಹೋಗಿ ಕೆಲ ದಿನಗಳ ಬಳಿಕ ಬಿಗ್‌ ಬಾಸ್‌ ಮನೆಗೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next