ಹೊಸದಿಲ್ಲಿ: ರವಿವಾರ ನಿಧನರಾದ ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ರವರ ಸ್ಮರಣಾರ್ಥ, ಅಂಚೆ ಚೀಟಿ ಬಿಡುಗಡೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಬಜೆಟ್ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಅಂಚೆ ಚೀಟಿ ಹೊರತರುವ ಮೂಲಕ ಲತಾರಿಗೆ ಗೌರವ ನೀಡಲು ಸರಕಾರ ತೀರ್ಮಾನಿಸಿದೆ ಎಂದಿದ್ದಾರೆ.
ಸ್ಮಾರಕ ನಿರ್ಮಾಣವಾಗಲಿ: ಮುಂಬಯಿಯ ಶಿವಾಜಿ ಪಾರ್ಕ್‌ನಲ್ಲಿ ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ರವರ ಅಂತ್ಯಸಂಸ್ಕಾರ ನಡೆದ ಜಾಗ ದಲ್ಲೇ ಅವರದ್ದೊಂದು ಸ್ಮಾರಕ ನಿರ್ಮಾಣವಾಗ ಬೇಕು ಎಂದು ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಈ ಕುರಿತು ಪತ್ರ ವನ್ನೂ ಬರೆದಿದ್ದಾರೆ.
ಮ್ಯೂಸಿಯಂ, ಸಂಗೀತ ಅಕಾಡೆಮಿ: ಲತಾ ಸ್ಮರಣಾರ್ಥವಾಗಿ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂದೋರ್‌ನಲ್ಲಿ ಕೆಲವು ಸಸಿಗಳನ್ನು ನೆಟ್ಟರು. ಅನಂತರ ಮಾತನಾ ಡಿದ ಅವರು, “ಅವರ ಸ್ಮರಣಾರ್ಥ ಇಂದೋರ್‌ನಲ್ಲಿ ಒಂದು ಸಂಗೀತ ಅಕಾಡೆಮಿ ಸ್ಥಾಪಿಸಲಾಗು ವುದು. ಅವರ ಎಲ್ಲಾ ಹಾಡುಗಳುಳ್ಳ ಸಂಗೀತ ಮ್ಯೂಸಿಯಂ ಸ್ಥಾಪಿಸಲಾಗುವುದು. ಸೆ. 28ರಂದು ಅವರ ಪ್ರತಿಮೆ ಅನಾವರಣ ಆಗಲಿದೆ’ ಎಂದರು.
ಲತಾರವರ ಚಿತಾಭಸ್ಮ ಪಡೆದ ಕುಟುಂಬ: ಲತಾ ಅವರ ಚಿತಾಭಸ್ಮವನ್ನು ಅವರ ಅಂತ್ಯಸಂಸ್ಕಾರ ನಡೆ ದಿದ್ದ ಶಿವಾಜಿ ಪಾರ್ಕ್‌ನಿಂದ ಸೋಮವಾರ ಸಂಗ್ರಹಿ ಸಲಾಗಿದೆ. ಚಿತಾಭಸ್ಮವನ್ನು ಕಳಶವೊಂದರಲ್ಲಿ ತುಂಬಿ ಅದನ್ನು ಅವರ ಸಹೋದರನ ಪುತ್ರ ಆದಿನಾಥ್ ರವರಿಗೆ ಹಸ್ತಾಂತರಿಸಲಾಯಿತು.
ಮೋದಿ ತಾಯಿಗೆ ಗುಜರಾತಿಯಲ್ಲೇ ಪತ್ರ!: 2019ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೆ ಮರು ಆಯ್ಕೆಯಾದಾಗ, ಲತಾ ಮಂಗೇಶ್ಕರ್, ಮೋದಿಯವರ ತಾಯಿ ಹೀರಾ ಬೆನ್ ಅವರಿಗೆ ಗುಜರಾತಿ ಭಾಷೆಯಲ್ಲಿ ಶುಭಾಶಯ ಪತ್ರವೊಂದನ್ನು ರವಾನಿಸಿದ್ದರು. ಅದನ್ನು ತಮ್ಮ ಸಂಗ್ರಹದಲ್ಲಿಟ್ಟುಕೊಂಡಿರುವ ಪ್ರಧಾನಿ ಮೋದಿ, ತಮ್ಮ ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಗಳಲ್ಲಿ ಪ್ರಕಟಿಸಿದ್ದಾರೆ.
“ನಿಮ್ಮ ಪುತ್ರ ಹಾಗೂ ನನ್ನ ಸಹೋದರ, ದೇಶದ ಪ್ರಧಾನಿಯಾಗಿ ಸತತ 2ನೇ ಬಾರಿಗೆ ಆಯ್ಕೆಯಾಗಿರುವುದು ಖುಷಿ ತಂದಿದೆ. ಹಾಗಾಗಿ, ಈ ಶುಭಾಶಯ ಪತ್ರ ರವಾನಿಸುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಾನು ಗುಜರಾತಿಯಲ್ಲಿ ಪತ್ರ ಬರೆದಿದ್ದು, ತಪ್ಪುಗಳೇನಾದರೂ ಇದ್ದರೆ ಕ್ಷಮಿಸಿ’ ಎಂದು ಲತಾ ಮಂಗೇಶ್ಕರ್ ಅವರು ಹೀರಾ ಬೆನ್ ಅವರನ್ನು ಪತ್ರದಲ್ಲಿ ಕೋರಿದ್ದಾರೆ.