Advertisement
ನಗರದಲ್ಲಿ ರವಿವಾರ (ಡಿ.08) ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ 144 ಸೆಕ್ಷನ್ ಅಡಿ ನಿಷೇಧ ಹೇರಿ ಕಾರ್ಯಕ್ರಮ ರದ್ದುಪಡಿಸುವುದರ ಜೊತೆಗೆ ಹೈದ್ರಾಬಾದ್ ಲೋಕಸಭೆಯ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಧವಿ ಲತಾ, ಗುಜರಾತಿನ ಖ್ಯಾತ ಭಾಷಣಕಾರ್ತಿ ಕಾಜಲ್ ಹಿಂದೂಸ್ತಾನಿ ಹಾಗೂ ಶ್ರೀರಾಮ ಸೇನೆಯ ರಾಷ್ಟೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಬೀದರಗೆ ಬರದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ ಎಂದು ಕಿಡಿಕಾರಿದರು.
Related Articles
Advertisement
ಇತ್ತೀಚೆಗೆ ಇದೇ ಮೈದಾನದಲ್ಲಿ ಅನ್ಯ ಕೋಮಿನ ಮೂರು ದಿವಸದ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಜಿಲ್ಲಾಡಿಳಿತ ನಿದ್ರೆಗೆ ಜಾರಿತ್ತೆ? ಈ ತಿಂಗಳ 11 ರಂದು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದಿಂದ ಮೌಲ್ವಿಗಳ ಸಮಾವೇಶ ನಡೆಯಲು ಈ ಸರ್ಕಾರ ಅನುಮತಿ ನೀಡಿದೆ. ಆದರೆ, ಇಡೀ ವಿಶ್ವದಲ್ಲಿಯೇ ಹಿಂದೂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಈ ದೇಶದಲ್ಲಿ ಹಿಂದುಗಳ ಮೇಲೆ ಅನ್ಯಾಯವೆಸಗಲಾಗುತ್ತದೆ ಎಂದರೆ ನಾವು ಕಾರ್ಯಕ್ರಮ ಎಲ್ಲಿ ಮಾಡಬೇಕು ಎಂಬುದು ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ಕಾಂಗ್ರೆಸ್‌ನವರು ಬೊಬ್ಬೆ ಹಾಕುತ್ತಿರುವುದು ಒಂದು ಕಡೆಯಾದರೆ, ಬಹು ಸಂಖ್ಯಾತ ಹಿಂದೂ ಸಮುದಾಯದ ಪ್ರಮುಖ ಕಾರ್ಯಕ್ರಮವಾಗಿರುವ ಈ ಬೃಹತ್ ಸಮಾವೇಶ ನಿಷೇಧಿಸಿ ಸಂವಿಧಾನವನ್ನು ಹಾಗೂ ಪ್ರಜಾಪ್ರಭುತ್ವವನ್ನು ಹಾಡುಹಗಲೇ ಕಗ್ಗೊಲೆ ಮಾಡಲು ಹೊರಟಿದೆ. ಇನ್ನು ಮುಂದೆ ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಕಳೆದುಕೊಂಡಿದೆ. ಈ ಕಾರ್ಯಕ್ರಮದ ನಿಷೇಧ ಕುರಿತು ಬೆಳಗಾವಿಯ ಅಧಿವೇಶನದಲ್ಲೂ ಸಹ ನಮ್ಮ ಬಿಜೆಪಿ ಶಾಸಕರ ಮೂಲಕ ದೊಡ್ಡ ರೀತಿಯಲ್ಲಿ ಧ್ವನಿ ಎತ್ತಲಾಗುವುದು. ಇನ್ನು ಮುಂದೆ ಉಚ್ಛ ನ್ಯಾಯಾಲಯದಲ್ಲಿ ಕಾರ್ಯಕ್ರಮದ ಆಯೋಜನೆಗೆ ಆದೇಶ ಪಡೆದು ಇನ್ನೂ ಹೆಚ್ಚಿನ ರೀತಿಯಲ್ಲಿ ಹಿಂದುಗಳನ್ನು ಸೇರಿಸಿ ಇದಕ್ಕಿಂತಲೂ ವಿಶಾಲ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಶಂಕ್ರೆಪ್ಪ ಪಾಟೀಲ, ವಿಶ್ವ ಹಿಂದೂ ಪರಿಷತ್ ವಿಭಾಗ ಪ್ರಮುಖ ರಾಮಕೃಷ್ಣ ಸಾಳೆ, ಪ್ರಮುಖರಾದ ಸೋಮಶೇಖರ ಪಾಟೀಲ ಗಾದಗಿ, ಬಸವರಾಜ ಸ್ವಾಮಿ ಹಾಗೂ ಇತರರಿದ್ದರು.