Advertisement

ನವೀಕರಣ ನೆಪದಲ್ಲಿ ಕಲಾಮಂಡಪಂ ಧ್ವಂಸ: ವರದಿ ಕೇಳಿದ ಕೇಂದ್ರ

07:26 PM Mar 03, 2018 | udayavani editorial |

ತಿರುವನಂತಪುರ : ಇಲ್ಲಿನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಪಾರಂಪರಿಕ ರಚನೆಯಾಗಿರುವ ಕಲಾಮಂಡಪಂ ಅನ್ನು ನವೀಕರಣ ಕಾಮಗಾರಿಯ ಭಾಗವಾಗಿ ಕೆಡವಿರುವ ಬಗ್ಗೆ ಕೇಂದ್ರ ಸರಕಾರ ಅಧಿಕಾರಿಗಳಿಂದ ವರದಿ ಕೇಳಿದೆ. 

Advertisement

ದೇವಳದ ಪದ್ಮತೀರ್ಥಂ ಸರೋವರ ತಟದಲ್ಲಿರುವ ಕಲಾಮಂಡಪಂ ರಚನೆಯನ್ನು ಈಚೆಗೆ ಕೆಡವಲಾಗಿತ್ತು. ಇದು ಶತಮಾನಗಳಷ್ಟು ಹಳೆಯ ರಚನೆಯಾಗಿದ್ದು ಅದಕ್ಕೆ ಪಾರಂಪರಿಕ ಮಹತ್ವ ಇತ್ತು. ನವೀಕರಣದ ನೆಪದಲ್ಲಿ ಇದನ್ನು ಈಚೆಗೆ ಕೆಡವಲಾಗಿತ್ತು. 

ಪ್ರವಾಸೋದ್ಯಮ ಮಹಾ ನಿರ್ದೇಶಕ ಸತ್ಯಜಿತ್‌ ರಾಜನ್‌ ಅವರು, ಕೆಡವಲಾದ ಮಂಡಪಂ ಮತ್ತು ಸರೋವರ ಪರಿಸರವನ್ನು ವೀಕ್ಷಿಸಿ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ವಿ ರತೀಶನ್‌ ಅವರಿಂದ ಈ ಬಗ್ಗೆ ವರದಿ ಕೇಳಲಾಗಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next