Advertisement
ಗರಿಷ್ಠ ಬೇಡಿಕೆ ಇರುವ ಕೇಂದ್ರವಾಗಿದ್ದರಿಂದ ಇದನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಾಗಿ ಮೇಲ್ದರ್ಜೆ ಗೇರಿಸಬೇಕು ಎನ್ನುವ ಆಗ್ರಹ ಹಳೆಯದ್ದು. ಆದರೆ ಇನ್ನೂ ಈಡೇರಿಲ್ಲ ಎಂಬುದು ಸ್ಥಳೀಯರ ಬೇಸರ.
ಸೇವೆ ಇವರಿಗೆ ಅಗತ್ಯವಿದೆ. ಹಾಗಾಗಿ ಪ್ರಾದೇಶಿಕ ಕೇಂದ್ರ ತೀರಾ ಅಗತ್ಯವಿದೆ. ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪ ಡುವ ಈಗಿನ ಕೇಂದ್ರಕ್ಕೆ ದಕ್ಷಿಣ ಕನ್ನಡ ಮಾತ್ರವಲ್ಲದೆ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ಕಡೆಯಿಂದ ಜನ ಬರುತ್ತಾರೆ. ಇದು ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರದ ಅಧೀನದಲ್ಲಿದೆ.
Related Articles
Advertisement
ಕರ್ನಾಟಕಕ್ಕಿಂತಲೂ ಸಣ್ಣ ರಾಜ್ಯವಾದ ಕೇರಳದಲ್ಲಿ ಮೂರು ಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರಗಳಿವೆ (ಕೊಚ್ಚಿ, ತಿರುವನಂತಪುರ, ಕೋಯಿಕ್ಕೋಡ್). ಮಹಾರಾಷ್ಟ್ರ, ತಮಿಳುನಾಡಿನಲ್ಲಿ ತಲಾ ಮೂರು ಪ್ರಾದೇಶಿಕ ಕಚೇರಿಗಳಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಒಂದೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಕಾರ್ಯಾಚರಿಸುತ್ತಿದ್ದು, ಇದರ ವ್ಯಾಪ್ತಿ ಯಲ್ಲಿ ಒಟ್ಟು 5 ಸೇವಾ ಕೇಂದ್ರಗಳಿವೆ.
ಇಬ್ಬರೇ ಸರಕಾರಿ ಅಧಿಕಾರಿಗಳುಮಂಗಳೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರ ಖಾಸಗಿ ಸಂಸ್ಥೆಯಿಂದ ನಿರ್ವ ಹಿಸಲ್ಪಡುತ್ತದೆ. ಇದರಲ್ಲಿ ಪಾಸ್ ಪೋರ್ಟ್ ಕೇಂದ್ರದಿಂದ ನಿಯೋಜಿತ ರಾದ ಇಬ್ಬರು ಸರಕಾರಿ ಅಧಿಕಾರಿಗಳು ಮಾತ್ರ ಇರುತ್ತಾರೆ. ಒಬ್ಬರು ದಾಖಲೆ ಪರಿಶೀಲಿಸಿದರೆ ಇನ್ನೊಬ್ಬರು ಪಾಸ್‌ಪೋರ್ಟ್ ಅನುಮೋದನೆ ಮಾಡುತ್ತಾರೆ. ಉಳಿದವರೆಲ್ಲ ಖಾಸಗಿ ಸಂಸ್ಥೆಯವರು. ಅರ್ಜಿ ಸ್ವೀಕಾರ, ಪ್ರಾಥಮಿಕ ಪರಿಶೀಲನೆ, ಡಾಟಾ ಎಂಟ್ರಿ ಮತ್ತು ಸಂಸ್ಕರಣೆ ಮಾತ್ರ ನಡೆಸಲಾಗುತ್ತದೆ. ಹೊಸ ಪಾಸ್‌ಪೋರ್ಟ್, ತತ್ಕಾಲ್ ಪಾಸ್‌ಪೋರ್ಟ್, ಪಾಸ್‌ಪೋರ್ಟ್ ನವೀಕರಣದ ಕೆಲಸ ಮಾತ್ರ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ನಡೆಯುತ್ತದೆ. ಮುದ್ರಣವೂ ಇಲ್ಲಿಲ್ಲ
ಪಾಸ್‌ಪೋರ್ಟ್ ಅರ್ಜಿ ಪರಿಶೀಲಿಸಿ, ಅನುಮೋದನೆ ಪಡೆದು ಬಳಿಕ ಬೆಂಗಳೂರಿನ ಪ್ರಾದೇಶಿಕ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಪಾಸ್‌ಪೋರ್ಟ್ ಮುದ್ರಣಗೊಂಡು ಅರ್ಜಿದಾರರಿಗೆ ರವಾನೆಯಾಗುತ್ತದೆ. ಪೊಲೀಸ್ ದೃಢೀಕರಣ ಸಮಯಕ್ಕೆ ಸರಿಯಾಗಿ ಆದರೆ ಮಾತ್ರ 10 ದಿನದೊಳಗೆ ಪಾಸ್‌ಪೋರ್ಟ್ ಪಡೆಯಬಹುದು. ಒಂದು ವೇಳೆ ಪಾಸ್‌ಪೋರ್ಟ್ ಪ್ರಾದೇಶಿಕ ಕಚೇರಿಯಾಗಿ ಮೇಲ್ದರ್ಜೆ ಗೇರಿದರೆ ಒಂದೆರಡು ದಿನದಲ್ಲೇ ಪಾಸ್‌ಪೋರ್ಟ್ ಸಿಗುವ ಅವಕಾಶಗಳಿವೆ ಎನ್ನುತ್ತವೆ ಮೂಲಗಳು. ಇದುವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಮಂಗಳೂರು ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಪ್ರಾದೇಶಿಕ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವ ಕುರಿತಾಗಿ ಅದರ ಮಾಹಿತಿಗಳನ್ನು ಸಂಗ್ರಹಿಸಿ ಈ ಅಧಿವೇಶನದಲ್ಲೇ ಪ್ರಸ್ತಾವಿಸುತ್ತೇನೆ.
-ಕ್ಯಾ| ಬ್ರಿಜೇಶ್ ಚೌಟ, ಸಂಸದರು, ದ.ಕ ಮಂಗಳೂರು ಪಿಎಸ್‌ಕೆಗೆ ಬರುವ ಅರ್ಜಿಗಳಲ್ಲಿ ಶೇ.50ರಷ್ಟು ಅರ್ಜಿಗಳು ಮಾತ್ರ ಅನುಮೋದನೆಗೊಳ್ಳುತ್ತವೆ. ಉಳಿದಂತೆ ಹೆಸರು, ದಿನಾಂಕದಲ್ಲಿ ವ್ಯತ್ಯಾಸ, ಡೂಪ್ಲಿಕೇಟ್ ಪಾಸ್‌ಪೋರ್ಟ್, ಡಬಲ್ ಪಾಸ್‌ಪೋರ್ಟ್ ಇತ್ಯಾದಿಗಳನ್ನು ಬೆಂಗಳೂರಿನ ಪ್ರಾದೇಶಿಕ ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ. ಇದರಿಂದಾಗಿ ಬಹಳಷ್ಟು ವಿಳಂಬವಾಗುತ್ತದೆ. ಒಂದು ವೇಳೆ ಇಲ್ಲೇ ಪಾಸ್‌ಪೋರ್ಟ್ ಪ್ರಾದೇಶಿಕ ಕಚೇರಿ ಇದ್ದರೆ ಎಲ್ಲ ಸೇವೆಗಳೂ ತ್ವರಿತಗೊಳ್ಳಲಿವೆ. ಮಂಗಳೂರು ಪ್ರಾದೇಶಿಕ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಇದು ಸಕಾಲ.
– ಐವನ್ ಡಿ’ಸೋಜಾ, ವಿಧಾನ ಪರಿಷತ್ ಸದಸ್ಯರು. -ವೇಣು ವಿನೋದ್ ಕೆ.ಎಸ್