Advertisement

ಇನ್ನು ವಾರದಲ್ಲಿ 4 ದಿನ ಕೆಲಸ, 3 ರಜೆ? ಕಾರ್ಮಿಕ ನಿಯಮಾವಳಿ ಬದಲಾವಣೆಗೆ ಮುಂದಾದ ಕೇಂದ್ರ

09:24 PM Feb 09, 2021 | Team Udayavani |

ನವದೆಹಲಿ: ವಾರಕ್ಕೆ ನಾಲ್ಕೇ ದಿನ ಕೆಲಸ! ಮೂರು ದಿನ ರಜೆ! “ಇದೇ ನಪ್ಪಾ ಮೂಗಿನ ಮೇಲೆ ತುಪ್ಪ ಸವರುವ ಮಾತೇ?’- ಖಂಡಿತಾ ಅಲ್ಲ. ಕಾರ್ಮಿಕ ನೀತಿಗಳ ತಿದ್ದುಪಡಿಗೆ ಕೈಹಾಕಿರುವ ಕೇಂದ್ರ ಸರ್ಕಾರ, ಕಾರ್ಮಿಕರಿಗೆ ಸಿಹಿಸುದ್ದಿ ನೀಡಲು ಮುಂದಾಗಿದೆ. ಈ ನೀತಿ ಶೀಘ್ರವೇ ಜಾರಿಗೊಳ್ಳುವ ನಿರೀಕ್ಷೆ ಇದೆ.

Advertisement

ಕಾರ್ಮಿಕ ಸಚಿವಾಲಯ ಕಾರ್ಯದರ್ಶಿ ಅಪೂರ್ವ ಚಂದ್ರ, “ಕೆಲಸದ ದಿನಗಳಲ್ಲಿನ ಒತ್ತಡ ಸಡಿಲಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಹಲವು ಕಂಪನಿಗಳು ವಾರದಲ್ಲಿ 4 ದಿನಗಳ ಕೆಲಸಕ್ಕೆ ಸಮ್ಮತಿಸಿವೆ. ಮತ್ತೆ ಕೆಲವು ಸಂಸ್ಥೆಗಳು ವಾರದಲ್ಲಿ 5 ದಿನಗಳ ಕರ್ತವ್ಯಕ್ಕೆ ಒಲವು ತೋರಿವೆ’ ಎಂದು ತಿಳಿಸಿದ್ದಾರೆ.

ಒಪ್ಪಂದ ಕಡ್ಡಾಯ: “ಸಂಸ್ಥೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ವಾರದಲ್ಲಿ 4, 5 ಅಥವಾ 6 ದಿನಗಳು ಕೆಲಸಕ್ಕೆ ಅನುಮತಿಸ ಬಹುದು. ಆದರೆ, ಸಂಸ್ಥೆ ಮತ್ತು ಉದ್ಯೋಗಿಯ ನಡುವೆ ವಾರದಲ್ಲಿ 4 ದಿನಗಳ ಕೆಲಸಕ್ಕೆ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯ ’ ಎಂದು ವಿವರಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ 4 ಕಾರ್ಮಿಕ ನಿಯಮಾವಳಿಗಳಿಗೆ ಸಂಸತ್‌ ಅನುಮೋದನೆ ನೀಡಿತ್ತು.

ಇದನ್ನೂ ಓದಿ:ಅಂತ್ಯಕ್ರಿಯೆ ಮುಗಿಸಿ ಬರುವಾಗ ಭೀಕರ ಅಪಘಾತ: 11 ಜನ ಸಾವು, 6 ಮಂದಿ ಆಸ್ಪತ್ರೆಗೆ ದಾಖಲು

ಈ ಕುರಿತ ಕರಡಿನ ಕುರಿತು ಜನವರಿಯಲ್ಲಿ ವಿವಿಧ ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು.
“ಕಾರ್ಮಿಕ ನೀತಿಗಳಿಗೆ ಅಂತಿಮರೂಪ ನೀಡುತ್ತಿದ್ದೇವೆ. ವಿವಿಧ ರಾಜ್ಯಗಳೊಂದಿಗೆ ಹೊಸ ನೀತಿಗಳ ಕುರಿತು ಮಾತುಕತೆ ನಡೆಸಿದ್ದೇವೆ. ಬಹುತೇಕ ರಾಜ್ಯಗಳು ನೂತನ ನೀತಿಗಳನ್ನು ದೃಢೀಕರಿಸುತ್ತಿವೆ. ಉತ್ತರ ಪ್ರದೇಶ, ಪಂಜಾಬ್‌, ಮಧ್ಯಪ್ರದೇಶದಂಥ ರಾಜ್ಯಗಳು ಫೆ.10ರೊಳಗೆ ತಮ್ಮ ಅಭಿಪ್ರಾಯ ಸಲ್ಲಿಸಲಿವೆ’ ಎಂದು ವಿವರಿಸಿದ್ದಾರೆ.

Advertisement

48 ಗಂಟೆ ಮಾತ್ರವೇ ಕೆಲಸ!
ವಾರದಲ್ಲಿ 4 ದಿನಗಳ ಕೆಲಸವಾದರೂ, ವಾರದಲ್ಲಿ ಒಟ್ಟು ಕರ್ತವ್ಯ ಅವಧಿ 48 ಗಂಟೆ ಮೀರಬಾರದು ಎಂದು ಕೂಡ ಕರಡು ನೀತಿ ಅಭಿಪ್ರಾಯಪಟ್ಟಿದೆ. ಅಂದರೆ, ಪ್ರಸ್ತುತವಿರುವ ನಿತ್ಯದ ಗರಿಷ್ಠ 10.5 ಗಂಟೆ ಕೆಲಸವನ್ನು 12 ಗಂಟೆಗೆ ಏರಿಸುವ ಸಾಧ್ಯತೆಯೂ ನಿಚ್ಚಳವಾಗಿದೆ. 12 ಗಂಟೆ ಅವಧಿಯಲ್ಲಿ ಊಟದ ವಿರಾಮ ಮತ್ತು ಇತರೆ ವಿರಾಮಗಳೂ ಸೇರಿಕೊಳ್ಳಲಿವೆ. ನಿತ್ಯ 12 ಗಂಟೆ ಕೆಲಸ ಮಾಡಿದವರಿಗೆ 4 ದಿನ ಕೆಲಸ, 10 ಗಂಟೆ ಕೆಲಸ ಮಾಡುವವರಿಗೆ 5 ದಿನ ಕೆಲಸ- ಈ ಹಕ್ಕನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನೂ ನೌಕರರಿಗೆ ನೀಡಲೂ ಕರಡು ಸಮ್ಮತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next