Advertisement

ಗ್ರಾಮೀಣ ಭಾಗದಲ್ಲಿ ಇ-ಕಾಮರ್ಸ್‌ ಸೇವೆ

03:05 AM Apr 30, 2020 | Hari Prasad |

ಹೊಸದಿಲ್ಲಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಾರತದ ಗ್ರಾಮೀಣ ಪ್ರದೇಶದಲ್ಲಿ ಇ-ಕಾಮರ್ಸ್‌ ಮೂಲಕ ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸಲು ಕೇಂದ್ರ ಸರಕಾರ ಮುಂದಾಗಿದೆ. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನ ಮಾದರಿಯಲ್ಲಿ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

Advertisement

ಇದಕ್ಕಾಗಿ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ತೆರೆಯಲಾಗುತ್ತಿದ್ದು, ಗ್ರಾಮೀಣ ಜನರು ಆನ್‌ಲೈನ್‌ ಅಥವಾ ಆಫ್ ಲೈನ್‌ ಮೂಲಕ ವಸ್ತುಗಳನ್ನು ಆರ್ಡರ್‌ ಮಾಡಬಹುದಾಗಿದೆ.

3.8 ಲಕ್ಷ ಮಳಿಗೆಗಳ (ಔಟ್‌ಲೆಟ್‌) ಮೂಲಕ 60 ಕೋಟಿ ಜನರನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮಳಿಗೆಗಳನ್ನು ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯದಡಿ ಖಾಸಗಿ ನಿರ್ವಹಣೆಗೆ ವಹಿಸಲಾಗುತ್ತದೆ.

ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುವುದು ಎಂದು ಸಿಎಸ್‌ಸಿ ಸಿಇಒ ದಿನೇಶ್‌ ತ್ಯಾಗಿ ಹೇಳಿರುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next