ಹೊಸದಿಲ್ಲಿ: ಕೇಂದ್ರ ಸರಕಾರ ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಂತೆಯೇ ಹುಟ್ಟಿಕೊಂಡ ಯೋಗ ಕೇಂದ್ರಗಳು ಹಾಗೂ ಕೋರ್ಸ್‌ಗಳನ್ನು ನಿಯಂತ್ರಿಸುವುದಕ್ಕಾಗಿ ಯೋಗ ಪ್ರಮಾಣೀಕರಣ ಮಂಡಳಿಯನ್ನು (ವೈಸಿಬಿ) ಸರಕಾರ ಸ್ಥಾಪಿಸಿದೆ. ಈ ಮಂಡಳಿಯು ಯೋಗ ತರಬೇತುದಾರರು ಹಾಗೂ ಯೋಗ ಕೇಂದ್ರಗಳಿಗೆ ಮಾನದಂಡ ನಿಗದಿಸಲಿದ್ದು, ಪ್ರಮಾಣಪತ್ರವನ್ನೂ ಒದಗಿಸಲಿದೆ. ವೈಸಿಬಿ ಅಡಿ ರೂಪಿಸಲಾದ ಸ್ಟೀರಿಂಗ್ ಸಮಿತಿಗೆ ಯೋಗ ಗುರು ಬಾಬಾ ರಾಮ್‌ದೇವ್ ಮುಖ್ಯಸ್ಥರಾಗಿದ್ದು, ತಾಂತ್ರಿಕ ಸಮಿತಿ ಹಾಗೂ ವಿಶ್ಲೇಷಣೆ ಸಮಿತಿಯನ್ನೂ ರಚಿಸಲಾಗಿದೆ. ಸ್ಟೀರಿಂಗ್ ಕಮಿಟಿಯಲ್ಲಿ 7 ಪ್ರಮುಖ ಯೋಗ ತರಬೇತುದಾರರೂ ಇದ್ದಾರೆ. ತಾಂತ್ರಿಕ ಸಮಿತಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಹಾಗೂ ವಿಶ್ಲೇಷಣೆ ಸಮಿತಿಗೆ ನೋಯ್ಡಾದ ಅಮಿಟಿ ಸಂಸ್ಥೆಯ ಅಧ್ಯಕ್ಷ ಡಾ. ಡಬ್ಲ್ಯೂಸೆಲ್ವಮೂರ್ತಿ ಮುಖ್ಯಸ್ಥರಾಗಿದ್ದಾರೆ.