Advertisement

ಸೆಲೆಬ್ರಿಟಿ ಟಾಕ್‌  ಶಾನ್ವಿ ಶ್ರೀವಾತ್ಸವ

02:42 PM Sep 20, 2017 | |

ಶಾನ್ವಿ ಶ್ರೀವಾತ್ಸವ ಸದ್ಯ ಕನ್ನಡದ ಬೇಡಿಕೆಯ ನಟಿಯರಲ್ಲಿ ಪ್ರಮುಖರು. ಮುದ್ದು ಮುಖದ ಈ ಹುಡುಗಿ ಮುಂಬೈ ಮೂಲದವಳು. ಸದ್ಯ ಈಕೆಗೆ ಬೆಂಗಳೂರೇ ಸ್ವಂತ ಊರಂತಾಗಿದೆ. ಕಾರಣ, ಕೈಯಲ್ಲಿ ದರ್ಶನ್‌ ನಾಯಕರಾಗಿರುವ “ತಾರಕ್‌’, ಶ್ರೀ ಮುರಳಿಯ “ಮುಫ್ಟಿ’, ರಕ್ಷಿತ್‌ ಶೆಟ್ಟಿಯ “ಅವನೇ ಶ್ರೀಮನ್ನಾರಾಯಣ’ದಂಥ ದೊಡ್ಡ ಚಿತ್ರಗಳು ಇವೆ. ತಮಿಳು ಚಿತ್ರವೊಂದರ ಚಿತ್ರೀಕರಣವೂ ಜೊತೆಯಲ್ಲೇ ಸಾಗಿದೆ. ಶಾನ್ವಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 2012ರಲ್ಲಿ, ತೆಲುಗು ಚಿತ್ರ “ಲವ್ಲಿ’ ಮೂಲಕ. “ಚಂದ್ರಲೇಖ’ ಕನ್ನಡದಲ್ಲಿ ಇವರ ಮೊದಲ ಚಿತ್ರ. ಇತ್ತೀಚೆಗಷ್ಟೇ ಬಿಡುಗಡೆಯಾದ “ಸಾಹೇಬ’ದಲ್ಲಿಯ ಅಭಿನಯದಿಂದ ಸಾಕಷ್ಟು ಮೆಚ್ಚುಗೆ ಪಡೆದಿದ್ದಾರೆ. “ಮುಂಬೈ-ಬೆಂಗಳೂರು ನಡುವಿನ ಪ್ರಯಾಣದಲ್ಲೇ ಸಮಯ ಕಳೆದು ಹೋಗುತ್ತಿದೆ’ ಎಂದು ಇವರು ಹೇಳುವಾಗಲೇ ನಾವು ಅರ್ಥ ಮಾಡಿಕೊಳ್ಳಬೇಕು ಇವರು ಎಷ್ಟು ಬ್ಯುಸಿ ಇದ್ದಾರೆ ಅಂತ. ಅವರ ಸಿನಿಮಾ ಜರ್ನಿ ಬಗ್ಗೆ ಮುಂದೆ ಅವರೇ ಹೇಳ್ತಾರೆ. ಓದಿಕೊಳ್ಳಿ….

Advertisement

-ಬೆಂಗಳೂರಿಗೆ ಬಂದಾಗ ನೀವು ಎಲ್ಲಿ ಉಳಿದುಕೊಳ್ಳುತ್ತೀರಿ?
ಕ್ರೆಸೆಂಟ್‌ ರೋಡ್‌ ಬಳಿಯ “ಗೋಲ್ಡ್‌ ಫಿಂಚ್‌’ ಹೋಟೆಲ್‌ನಲ್ಲಿ ಉಳಿಯುತ್ತೇನೆ. ಅಲ್ಲಿ ಊಟ ಕೂಡ ಚಂದ ಇರುತ್ತೆ. ಜೊತೆಗೆ ನನ್ನ ಡಯಟ್‌ಗೆ ಪೂರಕವಾಗಿ ಆಹಾರ ತಯಾರಿಸಿಕೊಡುತ್ತಾರೆ

-ಇಲ್ಲಿ ನಿಮಗಿಷ್ಟವಾದ ಆಹಾರ?
ಲಿವರ್‌ ಫ್ರೈ, ಜೊತೆಗೆ ಇಲ್ಲಿ ಸಿಗುವ ಮಂಗಳೂರು ಶೈಲಿ ಆಹಾರ ಇಷ್ಟ. 

– ಬೆಂಗಳೂರಿನಲ್ಲಿರುವ ನಿಮಗೆ ತುಂಬಾ ಇಷ್ಟವಾದ ರೆಸ್ಟೊರೆಂಟ್‌? 
“ಸನಾ-ಡಿ-ಗೆ’ ರೆಸ್ಟೊರೆಂಟ್‌. ಇಲ್ಲಿ ದೇಶದ ಬೇರೆ ಬೇರೆ ಭಾಗಗಳ ಶೈಲಿಯ ಸೀ ಫ‌ುಡ್‌ ಸಿಗುತ್ತೆ.

-ನಿಮ್ಮ ದೃಷ್ಟಿಯಲ್ಲಿ ಬೆಂಗಳೂರು ಅಂದ್ರೆ?
ಸುಂದರ ಮನಸ್ಸಿನವರಿರುವ ಸುಂದರ ನಗರ. ಆದರೆ ಇಲ್ಲಿ ಟ್ರಾಫಿಕ್‌ ಜಾಸ್ತಿ. ಅದೊಂದು ವಿಷಯ ನನಗೆ ತುಂಬಾ ಸಿಟ್ಟು ತರಿಸುತ್ತೆ.

Advertisement

-ನಿಮ್ಮದು ವಿದ್ಯಾವಂತ ಕುಟುಂಬ. ಎಲ್ಲರೂ ಉತ್ತಮ ಹುದ್ದೆಗಳಲ್ಲಿದ್ದಾರಂತೆ. ಆದರೆ ನೀವು ಚಿತ್ರರಂಗ ಆರಿಸಿಕೊಂಡಿದ್ದು ಏಕೆ?
ಹೌದು, ನನ್ನಮ್ಮ ಪ್ರಾಧ್ಯಾಪಕಿ, ನಮ್ಮ ಮನೆಯಲ್ಲಿ ಎಲ್ಲರೂ ತುಂಬಾ ಒದಿದ್ದಾರೆ. ನಾನೂ ಕಳೆದ ವರ್ಷವಷ್ಟೇ ಎಂಬಿಎ ಮುಗಿಸಿದೆ. ನಾನು ಬ್ಯಾಂಕ್‌ ಉದ್ಯೋಗಿ ಆಗಬೇಕು ಅಂತ ಕನಸು ಕಂಡಿದ್ದೆ. ಸಿನಿಮಾ, ಮಾಡೆಲಿಂಗ್‌ ಅಂತ ತಲೆ ಕೆಡಿಸಿಕೊಂಡವಳೇ ಅಲ್ಲ. ಆದರೆ ಆಕಸ್ಮಿಕವಾಗಿ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಈಗ ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಮತ್ತೆ ನಾನು ನನಗಿಂತ ಕಿರಿಯರಿಗೆ ಕೊಡೋ ಲೆಕ್ಚರ್‌ ಏನಂದ್ರೆ “ನಿಮ್ಮ ಆಸಕ್ತಿ ಯಾವ ಕ್ಷೇತ್ರದಲ್ಲಾದರೂ ಇರಲಿ. ಆದರೆ ವಿದ್ಯಾಭ್ಯಾಸವನ್ನು ಕಡೆಗಣಿಸಬೇಡಿ’ ಅಂತ.

– ಹಾಗಾದರೆ ನೀವು ತುಂಬಾ ಸ್ಟೂಡಿಯಸ್‌ ಸ್ಟೂಡೆಂಟ್‌ ಆಗಿದ್ರಿ ಅನ್ಸತ್ತೆ? 
ಕಾಲೇಜಲ್ಲಿರುವಾಗ ತುಂಬಾ ಮಜಾ ಮಾಡಿದ್ದೀನಿ. ನಾನು ತರಗತಿಗಳಿಗೆ ಬಂಕ್‌ ಹೊಡೆದು ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಹೋಗ್ತಿದ್ದೆ. ಕಾಲೇಜಿನಲ್ಲಿರುವಾಗ ಅದೆಷ್ಟು ಸಿನಿಮಾ ನೋಡಿದ್ದೀನೋ ಲೆಕ್ಕವೇ ಇಲ್ಲ. ತರಗತಿಯಲ್ಲಿ ಏನಾದರೂ ಕಿತಾಪತಿ ಮಾಡ್ತಾನೇ ಇರಿ¤ದ್ವಿ. ಲೆಕ್ಚರರ್‌ ನಮ್ಮ ಗುಂಪಿಗೆ “ಗೆಟ್‌ ಔಟ್‌’ ಅಂತ ಹೊರಗೆ ಕಳೊರು. ಇದೆಲ್ಲಾ ನನ್ನ ಪೋಷಕರಿಗೂ ಗೊತ್ತಿಲ್ಲ. ಯಾಕಂದ್ರೆ, ಚೆನ್ನಾಗಿ ಓದಿ ಒಳ್ಳೆ ಮಾರ್ಕ್ಸ್ ತಗೋತಿದ್ದೆ. ಹಾಗಾಗಿ ಯಾರೂ ಏನೂ ಕೇಳ್ತಿರಲಿಲ್ಲ. 

– ನಟನೆ ಮೇಲೆ ಆಸಕ್ತಿ ಬರಲು ಕಾರಣ? 
ಅದಕ್ಕೆ ಕಾರಣ ನನ್ನ ಅಕ್ಕ ವಿದಿಶಾ ಶ್ರೀವಾತ್ಸವ. ಆಕೆ ತುಂಬಾ ಬುದ್ಧಿವಂತೆ. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನುಗುವುದನ್ನು ಆಕೆಯಿಂದ ಕಲಿಯಬೇಕು. ಆಕೆ 19ನೇ ವಯಸ್ಸಿನಲ್ಲೇ ತೆಲುಗು ಚಿತ್ರರಂಗ ಪ್ರವೇಶಿಸಿದಳು. ಕನ್ನಡ ಚಿತ್ರದಲ್ಲೂ ನಟಿಸಿದ್ದಾಳೆ. ಅವಳಿಂದ ಉತ್ತೇಜಿತಳಾಗಿಯೇ ನಾನು ಸಿನಿಮಾ ಫೀಲ್ಡ್‌ಗೆ ಬಂದೆ.  

-ಕನ್ನಡ ಮತ್ತು ತೆಲುಗಿನಲ್ಲಿ ಸ್ಟಾರ್‌ ನಟಿ ಆಗ್ತಾ ಇದ್ದೀರಿ? ಇಲ್ಲೇ ಸೆಟಲ್‌ ಆಗುವ ಯೋಚನೆ ಇದೆಯಾ?
ನನಗೆ ಈ “ಸೂಪರ್‌ ಸ್ಟಾರ್‌’ ಪರಿಕಲ್ಪನೆಯಲ್ಲಿ ನಂಬಿಕೆಯಲ್ಲ. ನನಗೆ ನಟನೆಯಲ್ಲಿ ಆಸಕ್ತಿ ಬಂದಿದ್ದೇ ಈ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ. ಈಗ ನನ್ನ ಗಮನವೆಲ್ಲಾ ನಟನೆ ಕಡೆ ಮಾತ್ರ. ಲಕ್‌ ಇದ್ರೆ ಸೂಪರ್‌ ಸ್ಟಾರ್‌ ಆಗ್ತಿàನಿ, ಇಲ್ಲಾ ಅಂದ್ರೂ ಉತ್ತಮ ನಟಿ ಅಂತ ಅನ್ನಿಸಿಕೊಳ್ತೀನಿ ಅನ್ನೋ ನಂಬಿಕೆ ಖಂಡಿತ ಇದೆ. 

-ಈಗಲೂ ಮುಂಬೈನಲ್ಲೇ ಇದ್ದೀರಾ? ಬೆಂಗಳೂರಿಗೆ ಶಿಫ್ಟ್ ಆಗುವ ಯೋಚನೆ ಇಲ್ವಾ?
ನಾನು ಈಗಲೂ ಮುಂಬೈನಲ್ಲೇ ಇರುವುದು. ಬೆಂಗಳೂರಿನಲ್ಲಿ ಮನೆ ಮಾಡುವ ಯೋಚನೆ ಖಂಡಿತಾ ಇಲ್ಲ. ನನ್ನ ಕುಟುಂಬ ಮುಂಬೈಲಿದೆ. ಅವರನ್ನು ಬಿಟ್ಟು ನಾನು ಇಲ್ಲಿಗೆ ಬರಲ್ಲ. ಒಬ್ಬಳೇ ಇರಲು ನನಗೆ ಸಾಧ್ಯವೇ ಇಲ್ಲ.

-ಈ ಕ್ಷೇತ್ರ ಆಯ್ದುಕೊಂಡಿದ್ದರ ಬಗ್ಗೆ ಎಂದಾದರೂ ಬೇಸರಗೊಂಡಿದ್ದಿದೆಯೇ?
ನಾನು ಮಾಡುವ ಯಾವ ಕೆಲಸದ ಬಗ್ಗೆಯೂ ನನಗೆ ಪಶ್ಚಾತಾಪ ಇರಲ್ಲ. ಅಷ್ಟಕ್ಕೂ ಬೇಸರ ಮಾಡಿಕೊಳ್ಳಲು ಏನಿದೆ? ಈ ಉದ್ಯಮ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಇಲ್ಲಿಂದಲೇ ಅನ್ನ, ಹೆಸರು ಸಂಪಾದಿಸುತ್ತಿದ್ದೇನೆ. ಇದೇ ನನಗೆ ಜೀವನ. ದೇಶದಲ್ಲಿ ಎಲ್ಲೇ ಹೋದರೂ ಕನ್ನಡಿಗರು ಮತ್ತು ತೆಲುಗು ಭಾಷಿಕರು ನನ್ನನ್ನು ಗುರುತಿಸುತ್ತಾರೆ. ಇನ್ನೇನು ಬೇಕು ನನಗೆ.

-ಚಿತ್ರರಂಗಕ್ಕೆ ಬಂದ ಮೇಲೆ ನಿಮ್ಮ ಪಾಲಿನ ಅಮೂಲ್ಯ ಕ್ಷಣ ಯಾವುದು?
ಕೆಲವೊಮ್ಮೆ ಜನರು ನನ್ನ ಅಮ್ಮನಿಗೆ, ನಿಮ್ಮ ಮಗಳು ಚೆನ್ನಾಗಿ ನಟಿಸುತ್ತಾಳೆ. ಅವಳಿಗೆ ಒಳ್ಳೆಯ ಭವಿಷ್ಯವಿದೆ ಎಂದೆಲ್ಲಾ ಹೇಳ್ತಾರೆ. ಆಗೆಲ್ಲ ಅಮ್ಮನ ಬಾಯಿಂದ ಮಾತೇ ಹೊರಡುವುದಿಲ್ಲ. ಕಣ್ತುಂಬಾ ನೀರು ತುಂಬಿಕೊಳ್ಳುತ್ತಾರೆ. ನನಗೆ ಸಿನಿಮಾ ಅವಕಾಶ ಸಿಕ್ಕ ಕೂಡಲೇ ಅಮ್ಮ ಮತ್ತು ಅಕ್ಕ, ಅಣ್ಣನಿಗೆ ಹೇಳೆ¤àನೆ. ಅವರು ಪ್ರೀತಿಯಿಂದ ಹಾರೈಸುತ್ತಾರೆ. ಇಂಥಾ ಘಟನೆಗಳೇ ನನಗೆ ಅಮೂಲ್ಯ ಕ್ಷಣಗಳು. 

-ಬಿಡುವಿನಲ್ಲಿ ಹೇಗೆ ಟೈಂ ಪಾಸ್‌ ಮಾಡ್ತೀರಿ?
ನನಗೆ ಬಿಡುವು ಸಿಗುವುದೇ ಅಪರೂಪ. ಬರೀ ಲಗೇಜ್‌ ಪ್ಯಾಕ್‌ ಮಾಡುವುದೇ ಆಗುತ್ತದೆ. ಸ್ವಲ್ಪ ಬಿಡುವು ಸಿಕ್ರೆ ಅದರಲ್ಲಿ ಹೆಚ್ಚಿನ ಬಾಗ ವಕೌìಟ್‌ ಮಾಡಲು ವ್ಯಯಿಸುತ್ತೇನೆ. ಜೊತೆಗೆ ಪೇಂಟಿಂಗ್‌ ಮಾಡುತ್ತೇನೆ. ನನಗೆ ಪ್ರವಾಸ ಎಂದರೆ ತುಂಬಾ ಇಷ್ಟ. ವರ್ಷಕ್ಕೆ 2-3 ಬಾರಿ ಕುಟುಂಬ ಮತ್ತು ಸ್ನೇಹಿತರ ಜೊತೆ ಪ್ರವಾಸ ಹೊರಡುತ್ತೇನೆ. ಕಾಡಿನಲ್ಲಿ ಬಾನ್‌ಫೈರ್‌ ಹಾಕಿಕೊಂಡು ಸುತ್ತಲು ಡ್ಯಾನ್ಸ್‌ ಮಾಡುವುದು ನನಗೆ ತುಂಬಾ ಇಷ್ಟ .

-ಅಡುಗೆ ಮನೆ ಕಡೆ ಹೋಗೊ ಅಭ್ಯಾಸ ಇದೆಯಾ? ಯಾವ ಅಡುಗೆ ಮಾಡುವುದರಲ್ಲಿ ನೀವು ಎಕ್ಸ್‌ಪರ್ಟ್‌? 
ಅಡುಗೆ ಮಾಡಲು ತುಂಬಾ ಇಷ್ಟ. ಪುಸ್ತಕ ನೋಡಿ, ಇಂಟರ್‌ನೆಟ್‌ ನೋಡಿ ನಾನು ಅಡುಗೆ ಮಾಡುವುದಿಲ್ಲ. ನಾನೇ ನನ್ನದೇ ಹೊಸ ರುಚಿಗಳನ್ನು ಪ್ರಯೋಗ ಮಾಡುತ್ತೇನೆ. ಒಮ್ಮೆ ಸಕ್ಸ್‌ಸ್‌ ಆದ್ರೆ, ಮತ್ತೂಮ್ಮೆ ಫೇಲ್‌ ಆಗುತ್ತೆ. ಯಾರೂ ತಿನ್ನದೇ ಇದ್ದರೆ ಒತ್ತಾಯ ಮಾಡಿಯಾದರೂ ನಾ ಮಾಡಿದ ಅಡುಗೆ ತಿನ್ನಿಸದೇ ಇರುವುದಿಲ್ಲ. ಅಡುಗೆ ಮಾಡುವುದಕ್ಕಿಂತ ತಿನ್ನುವುದು ನನಗೆ ಇಷ್ಟ. 

-ನಿಮ್ಮ ಡಯಟ್‌ ಹೇಗಿರತ್ತೆ?
ಟೈಮ್‌ಟೇಬಲ್‌ ಹಾಕಿಕೊಂಡು ಡಯಟ್‌ ಮಾಡುವ ಪೈಕಿ ನಾನಲ್ಲ. ಜಂಕ್‌ ಫ‌ುಡ್‌ ತಿನ್ನುವುದಿಲ್ಲ ಮತ್ತು ಹೆಚ್ಚು ನೀರು ಕುಡಿಯುತ್ತೇನೆ. ಆರೋಗ್ಯಕರ ಆಹಾರವನ್ನು ದಿನದಲ್ಲಿ 6-7 ಬಾರಿ ಸ್ವಲ್ಪ ಸ್ವಲ್ಪವೇ ತಿನ್ನುತ್ತೇನೆ. 

-ಡಯಟ್‌ ಟಿಪ್‌ ಕೊಡೊದಾದರೆ?
ಸಣ್ಣಗಾಗಬೇಕೆಂದರೆ ದಿನಕ್ಕೆ 6 ಹೊತ್ತು ಆರೋಗ್ಯಕರ ಆಹಾರವನ್ನು ಕಡಿಮೆ ಕಡಿಮೆ ತಿನ್ನಿ. ದಪ್ಪಗಾಗಬೇಕಾದರೆ ದಿನದಲ್ಲಿ  6 ಬಾರಿ ಹೆಚ್ಚು ಹೆಚ್ಚು ತನ್ನಿ. ತಿಂದಿದ್ದನ್ನು ವ್ಯಾಯಾಮ ಮಾಡಿ ಕರಗಿಸಿದಿದ್ದರೆ ಕೊಬ್ಬು ಶೇಕರಣೆ ಆಗಿ ದಪ್ಪಗಾಗುತ್ತೀರ. ನಾನು ಶೂಟಿಂಗ್‌ನಲ್ಲಿ ಇರುವ ವೇಳೆ ಹೆಚ್ಚು ಹೊತ್ತು ಕುಳಿತೇ ಕಾಲ ಕಳೆಯುವುದಿಲ್ಲ. ಸ್ವಲ್ಪ ಜಾಗವಿದ್ದರೂ ನಡೆದಾಡುತ್ತೇನೆ. ಇಲ್ಲದಿದ್ದರೆ ಕುಳಿತಿರುವ ಬದಲು ನಿಂತುಕೊಳ್ಳುತ್ತೇನೆ. ಹೀಗೆ ಮಾಡುವುದರಿಂದ ಸ್ವಲ್ಪವಾದರೂ ಕ್ಯಾಲರಿ ಬರ್ನ್ ಆಗತ್ತೆ.

– ಶಾನ್ವಿ ಬ್ಯೂಟಿ ರಹಸ್ಯವೇನು?
ಸ್ಮೈಲ್‌, ಸ್ಮೈಲ್‌ ಮತ್ತು ಸ್ಮೈಲ್‌. ಖುಷಿಯಾಗಿದ್ದು ಮುಖದಲ್ಲಿ ಸದಾ ನಗು ತುಳುಕಿಸುತ್ತಿದ್ದರೆ ನಾನಷ್ಟೇ ಅಲ್ಲ ಯಾರಾದರೂ ಚಂದ ಕಾಣಲೇ ಬೇಕು. ಕೆಲಸದ ಒತ್ತಡ, ಟೆನನ್‌ ಇದ್ದೇ ಇರುತ್ತದೆ. ಆದರೆ ನಮಗೆ ಖುಷಿ ಕೊಡುವಂಥ ಸ್ನೇಹಿತರ ಜೊತೆ ಮಾತನಾಡಿ, ಕುಟುಂಬದ ಜೊತೆ ಕಾಲ ಕಳೆದು ಒತ್ತಡ ನಿವಾರಿಸಿಕೊಂಡು ಖುಷಿಯಾಗಿರುತ್ತೇನೆ. ಅದಕ್ಕೇ ನಾನು ಚಂದ ಕಾಣುವುದು ಅನಿಸತ್ತೆ.

– ಯಾವಾಗ ಮದುವೆ ಆಗ್ತಿರ? 
ನನಗಿನ್ನೂ 23 ವರ್ಷ ವಯಸ್ಸು. ಇನ್ನೊಂದು 4-5 ವರ್ಷ ಬಿಟ್ಟು ಆಗ್ತಿàನಿ. ನಿಜ ಹೇಳಬೇಕೆಂದರೆ ನನಗೆ ಕುಟುಂಬ ಎಂಬ ಪರಿಕಲ್ಪನೆಯಲ್ಲಿ ಬಹಳ ಆಸಕ್ತಿ ಇದೆ. ಹಾಗಾಗಿ, ಮದುವೆಯಾಗಲ್ಲ. ನನಗೆ ವೃತ್ತಿ ಜೀವನವೇ ಮುಖ್ಯ ಎನ್ನುವ ಹುಡುಗಿ ನಾನಲ್ಲ. ಮದುವೆಯಾಗಿ ಚಂದವಾಗಿ ಸಂಸಾರ ನಡೆಸುತ್ತೇನೆ ಎನ್ನುವವಳು ನಾನು. 

ನನಗೆ ಏನೇನು ಇಷ್ಟ ಗೊತ್ತಾ?
-ಇಷ್ಟದ ಆಹಾರ
 ಚಿಕನ್‌, ಫಿಶ್‌, ಏಡಿ, ಅಣಬೆ, ಬ್ರೌನಿ ಕೇಕ್‌ ವಿದ್‌ ಐಸ್‌ಕ್ರೀಂ
-ನಿಮ್ಮ ಪ್ರಕಾರ ನಿಮ್ಮ ಬೆಸ್ಟ್‌ ಸಿನಿಮಾ ಯಾವುದು ಮತ್ತು ಏಕೆ?
 “ಸಾಹೇಬ’ ಮತ್ತು “ಮಾಸ್ಟರ್‌ ಪೀಸ್‌’. ಸಾಹೇಬ ನಟನೆಗೆ ಅವಕಾಶ ಕೊಟ್ಟಿತು. ತೆರೆ ಮೇಲೆ ಹೆಚ್ಚು ಹೊತ್ತು ಕಾಣಿಸಿಕೊಂಡಿದ್ದೇನೆ. ಮಾಸ್ಟರ್‌ಪೀಸ್‌ ನನಗೆ ಐಡೆಂಟಿಟಿ ಕೊಟ್ಟಿತು.
-ನಿಮ್ಮ ಉತ್ತಮ ಸಹನಟ ಯಾರು?  
ಮನೋರಂಜನ್‌ ಮತ್ತು ದರ್ಶನ್‌ 
-ಕನ್ನಡ ನಟಿಯರಲ್ಲಿ ಉತ್ತಮ ಫಿಟ್‌ನೆಸ್‌ ಹೊಂದಿರುವ ನಟಿ?
 ಸಂಯುಕ್ತಾ ಹೆಗಡೆ. ಅವರನ್ನು ಬಿಟ್ಟರೆ ನಾನೇ.
-ನಿಮ್ಮ ಫೇವರೆಟ್‌ ಹೀರೊ?
 ಪುನೀತ್‌ ರಾಜ್‌ಕುಮಾರ್‌
-ಫೇವರೆಟ್‌ ಡ್ರೆಸ್‌
 ಸೀರೆ
-ಫೇವರೆಟ್‌ ಕಲರ್‌
 ನೀಲಿ
-ಆಲ್‌ಟೈಮ್‌ ಫೇವರೆಟ್‌ ಸಿನಿಮಾ? 
ಟೈಟಾನಿಕ್‌, ಥ್ರಿ ಈಡಿಯಟ್ಸ್‌
-ಇಷ್ಟದ ರಾಜಕಾರಣಿ? 
ನನಗೆ ರಾಜಕಾರಣ ಅಂದ್ರೆ ಏನು ಅಂತಲೇ ಗೊತ್ತಿಲ್ಲ. ಇನ್ನು ರಾಜಕಾರಣಿ ಹೆಸರುಗಳು ಗೊತ್ತಿರತ್ತಾ? 

 ಐ ಲವ್‌ ಬೆಂಗಳೂರು
-ಬೆಂಗಳೂರಿನ ಅನುಭವ ಹೇಳಿ?
ನಾನು ಉತ್ತರ ಪ್ರದೇಶದವಳು. ಬೆಳೆದಿದ್ದು ಮುಂಬೈನಲ್ಲಿ. ಮುಂಬೈನಲ್ಲಿ ಎಲ್ಲಿ ಬೇಕೆಂದರಲ್ಲಿ ಅಡ್ಡಾಡುತ್ತೇನೆ. ಅಷ್ಟಾಗಿ ಯಾರೂ ನನ್ನನ್ನು ಗುರುತಿಸುವುದಿಲ್ಲ. ಆದರೆ ಬೆಂಗಳೂರಿನಲ್ಲಿ ಹಾಗಲ್ಲ. ನಾನು ಹೊರಗಡೆ ಕಾಲಿಡುತ್ತಿದ್ದಂತೆಯೇ ಜನರು ಗುರುತು ಹಿಡಿದು ಮಾತನಾಡಿಸುತ್ತಾರೆ. ಸೆಲ್ಫಿ ಕೇಳುತ್ತಾರೆ. ಶೂಟಿಂಗ್‌ ಸಮಯದಲ್ಲಿ ಅಥವಾ ಇನ್ನಾವುದಾದರೂ ಜನನಿಬಿಡ ಜಾಗಗಳಲ್ಲಿ ಹುಡುಗರು “ಅಣ್ಣಂಗೇ ಲವ್‌ ಆಗಿದೆ…..’ ಎಂದು ಹಾಡಲು ಆರಂಭಿಸಿಬಿಡ್ತಾರೆ. ಆಗೆಲ್ಲಾ ಸ್ವಲ್ಪ ನಾಚಿಕೆ ಆಗತ್ತೆ. ಆದರೆ ತುಂಬಾ ಖುಷಿ ಆಗತ್ತೆ. ಬೆಂಗಳೂರಿನಲ್ಲಿ ಇರುವಷ್ಟು ದಿನ ನನಗೆ ಒಂಥರಾ ಜಂಭ ಇರುತ್ತದೆ.

ಚೇತನ ಜೆ.ಕೆ. 

Advertisement

Udayavani is now on Telegram. Click here to join our channel and stay updated with the latest news.

Next