Advertisement

RSS: ರಾಮ ಮಂದಿರ ಲೋಕಾರ್ಪಣೆ ಹಬ್ಬದಂತೆ ಆಚರಿಸಿ: ಆರ್‌ಎಸ್‌ಎಸ್‌

11:08 PM Nov 11, 2023 | Team Udayavani |

ಹೊಸದಿಲ್ಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ರಾಮ ಮಂದಿರದ ಲೋಕಾರ್ಪಣೆ ಸಮಾರಂಭವು 2024ರ ಜ.22ರಂದು ನಡೆಯಲಿದೆ. ಪ್ರತಿಯೊಬ್ಬರಿಗೂ ಇದೊಂದು ಆನಂದದ ಕ್ಷಣ. ಅಂದು ದೇಶಾದ್ಯಂತ ನಾಗರಿಕರು ಹಬ್ಬದಂತೆ ರಾಮ ಮಂದಿರ ಉದ್ಘಾಟನೆಯನ್ನು ಆಚರಿಸಿ ಎಂದು ಆರ್‌ಎಸ್‌ಎಸ್‌ ಕರೆ ನೀಡಿದೆ. ಗುಜರಾತ್‌ನ ಕಛ್‌ ಜಿಲ್ಲೆಯ ಭುಜ್‌ನಲ್ಲಿ ನಡೆದ ಮೂರು ದಿನಗಳ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ಇದರ ಅಂಗವಾಗಿ ದೇಶಾದ್ಯಂತ ನಡೆಯಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.

Advertisement

“ಅನೇಕ ವರ್ಷಗಳ ಶ್ರಮದ ಫ‌ಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದರ ಉದ್ಘಾಟನೆ ದಿನವಾದ ಜ.22ರಂದು ಪ್ರತಿಯೊಬ್ಬರು ಸಮೀಪದ ದೇಗುಲಗಳಿಗೆ ಭೇಟಿ ನೀಡಿ, ಹಬ್ಬದಂತೆ ಆಚರಿಸಿ. ಅಂದು ರಾತ್ರಿ ಮನೆಗಳಲ್ಲಿ ದೀಪಗಳನ್ನು ಬೆಳಗಿ’ ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next