Advertisement

ಬಿಜೆಪಿ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸಿಬಿಐ ದುರುಪಯೋಗ: ಕಾಂಗ್ರೆಸ್ ಶಾಸಕ ಅಜಯ್ ಸಿಂಗ್

07:38 PM Oct 05, 2020 | Mithun PG |

ಕಲಬುರಗಿ: ರಾಜ್ಯದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೇವಲ 25 ದಿನಗಳು ಮಾತ್ರವೇ ಬಾಕಿ ಇರುವ ಸಮಯದಲ್ಲೇ ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ದಾಳಿ ಮಾಡಿರುವುದು ರಾಜಕೀಯ ಪ್ರೇರಿತ ಎಂಬುವುದು ಸ್ಪಷ್ಟ. ಬಿಜೆಪಿ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸಿಬಿಐ ದುರುಪಯೋಗ ಪಡಿಸಿಕೊಂಡು ಈ ದಾಳಿ ಮಾಡಿಸಿರಬಹುದು ಎಂದು ವಿಧಾನಸಭೆಯಲ್ಲಿನ ಕಾಂಗ್ರೆಸ್ ಮುಖ್ಯ ಸಚೇತಕರಾದ ಶಾಸಕ ಡಾ.ಅಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಅಧ್ಯಕ್ಷರ ಮನೆ ಮತ್ತು ಬೇರೆ-ಬೇರೆ ಕಡೆ ಸಿಬಿಐನವರು ದಾಳಿ ಮಾಡಿದ್ದಾರೆ. ಈ ಹಿಂದಿನ ದಾಳಿ ಪ್ರಕರಣದಲ್ಲಿ ಪ್ರತಿ ಸಲವೂ ಡಿಕೆಶಿ ಸಹಕಾರ ನೀಡುತ್ತಾ ಬಂದಿದ್ದಾರೆ. ಆದರೂ, ಅವರ ಮೇಲೆ ದಾಳಿ ಮಾಡುವ ಅವಶಕತ್ಯೆ ಏನು ?. ಚುನಾವಣೆ ಸಮಯದಲ್ಲಿ ದಾಳಿ ಮಾಡಿದ್ದು ಎಷ್ಟು ಸರಿ?. ಬಿಜೆಪಿಯವರಿಗೆ ಚುನಾವಣೆಯನ್ನೇ ಎದುರಿಸಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುವ‌ ಎಲ್ಲ ಪ್ರತಿಪಕ್ಷದವರ ಮೇಲೆ ಐಟಿ, ಇಡಿ, ಸಿಬಿಐಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ರಾಜಸ್ಥಾನದ ರಾಜಕೀಯ ಬಿಕ್ಕುಟ್ಟು ಸಂದರ್ಭದಲ್ಲಿ ಅಶೋಕ ಗೆಹ್ಲೋಟ್ ಅವರ ಅಣ್ಣನ ಮೇಲೆ ದಾಳಿ ಮಾಡಿಸಿದ್ದರು. ಕಳೆದ ಎರಡು ವರ್ಷದಲ್ಲಿ ಎಷ್ಟು ಜನ ಬಿಜೆಪಿಯವರ ಮೇಲೆ ಎಷ್ಟು ಬಾರಿ ಐಟಿ, ಇಡಿ, ಸಿಬಿಐ ಮಾಡಿವೆ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next