Advertisement
ಪಟ್ಟಣಕ್ಕೆ ಕಾವೇರಿ ನದಿಯ ಮೂಲಕ ಕುಡಿವ ನೀರು ಪೂರೈಕೆಯಾಗದೆ ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕಾವೇರಿ ನದಿಯಿಂದ ಪೈಪ್‌ಲೈನ್ ಮೂಲಕ ನೀರನ್ನು ತರಲಾಗುತ್ತದೆ. ಇದಕ್ಕೆ ಉತ್ತಂಬಳ್ಳಿ ಗ್ರಾಮದಲ್ಲಿ ಶುದ್ಧ ನೀರನ್ನು ಪೂರೈಸಲು ಉದ್ದೇಶದಿಂದ 2011 ರಲ್ಲಿ ಕರ್ನಾಟಕ ಜಲ ಮಂಡಲಿ ವತಿಯಿಂದ 3.54 ದಶಲಕ್ಷ ಲೀ. ಸಾಮರ್ಥ್ಯದ ನೀರು ಶುದ್ಧೀಕರಣ ಘಟಕವನ್ನು ಆರಂಭಿಸಲಾಗಿದೆ.
Related Articles
Advertisement
ಕುಡಿಯುವ ನೀರಿಗೆ ಕ್ರಮ: ಪಟ್ಟಣಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಘಟಕದಿಂದ ಹಾದು ಹೋಗಿರುವ ಉತ್ತಂಬಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುವ ಸ್ಥಳದಲ್ಲಿ ಕಾವೇರಿ ನೀರಿನ ಪೈಪ್ ಲೈನ್ ಒಡೆದು ಹೋಗಿದೆ. ಇದರಿಂದ ನೀರಿನ ಪೂರೈಕೆಯಲ್ಲಿ ವಿಳಂಬವಾಗಿದೆ. ಮತ್ತೆ ಮಾಂಬಳ್ಳಿ, ಯರಿಯೂರು, ಮದ್ದೂರು ಗ್ರಾಮಗಳಲ್ಲಿ ಹೊಸದಾಗಿ ಪೈಪ್ ಲೈನ್ ಜೋಡಿಸಲಾಗುತ್ತಿದೆ. ಈ ಕಾಮಗಾರಿಯು 2 ದಿನಗಳಲ್ಲಿ ಮುಗಿಸಿ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಪ.ಪಂ.ಆರೋಗ್ಯಾಧಿಕಾರಿ ಮಹೇಶ್‌ಕುಮಾರ್ ಹೇಳಿದರು.
ಕುಡಿವ ನೀರನ ಸಮಸ್ಯೆ ಉಲ್ಬಣಗೊಳ್ಳಲು ಅಧಿಕಾರಿಗಳು ಬೇಸಿಗೆ ಸಮಯದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಮುಖ್ಯ ಕಾರಣ. ಈ ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಕ್ರಮ ವಹಿಸಿ ಕುಡಿಯುವ ನೀರಿನ ಪೂರೈಕೆಯಾಗುವ ನಿಟ್ಟಿನಲ್ಲಿ ಮುಂದಾಗಬೇಕು -ನಂಜುಂಡ ಬಡಾವಣೆ ನಿವಾಸಿ * ಫೈರೋಜ್‌ಖಾನ್