ಬೆಂಗಳೂರು : ಕರ್ನಾಟಕದ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಪ್ರಾಧಿಕಾರ ರಚಿಸಿ ಆದೇಶ ಹೊರಡಿಸಿರುವುದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಏಕಪಕ್ಷೀಯ ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದರು.
ಕೇಂದ್ರದ ತೀರ್ಮಾನವನ್ನು ಮರುಪರುಶೀಲನೆ ನಡೆಸಲು ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಇತ್ತೀಚೆಗಷ್ಟೇ ಪ್ರಧಾನಿ ಭೇಟಿ ಮಾಡಿದ್ದ ಸಿಎಂ ಕುಮಾರಸ್ವಾಮಿ, ಸಮಿತಿ ಯಲ್ಲಿನ ಕೆಲವು ಲೋಪ ದೋಷ ಗಳನ್ನು ನಿವಾರಿ ಸು ವವರೆಗೆ ಪ್ರಾಧಿಕಾರ ರಚಿಸಿ ಅಧಿಸೂಚನೆ ಹೊರಡಿಸಬೇಡಿ ಎಂದು ಮನವಿ ಮಾಡಿದ್ದರು. ಅಷ್ಟೇ ಅಲ್ಲ,ಅಲ್ಲಿಯ ವರೆಗೆ ರಾಜ್ಯದಿಂದ ಸಮಿತಿಗೆ ಸದಸ್ಯರನ್ನೂ ನೇಮಕ ಮಾಡುವುದಿಲ್ಲವೆಂದು ಹೇಳಿದ್ದರು.
ಕೇಂದ್ರ ಜಲ ಸಂಪನ್ಮೂಲ ಇಲಾಖೆ ಪ್ರಾಧಿಕಾರ ರಚಿಸಿಸಿರುವ ಪ್ರಾಧಿಕಾರದಲ್ಲಿ ಕೇಂದ್ರ ಜಲ ಆಯೋಗದ ಅಧ್ಯಕ್ಷ ಎಸ್. ಮಸೂದ್ ಹುಸೇನ್ ಸಮಿತಿಯ ನೇತೃತ್ವ ವಹಿಸಿರುತ್ತಾರೆ. ಮುಖ್ಯ ಎಂಜಿನಿ ಯರ್ ನವೀನ್ ಕುಮಾರ್ ಕೇಂದ್ರದ ಪ್ರತಿನಿಧಿಯಾಗಿರಲಿದ್ದಾರೆ.
ಕೇರಳದ ಕೆ.ಎ.ಜೋಶಿ, ಪುದುಚೇರಿಯ ವಿ.ಶಣ್ಮುಗಸುಂದರಂ, ತಮಿಳು ನಾಡಿನ ಆರ್.ಸೆಂಥಿಲ್‌ಕುಮಾರ್, ಭಾರತೀಯ ಹವಾಮಾನ ಇಲಾ ಖೆಯ ವಿಜ್ಞಾನಿ ಡಾ.ಎಂ.ಮೊಹಾ ಪಾತ್ರ, ಕೇಂದ್ರ ಜಲ ಆಯೋಗ ಕೊಯಮತ್ತೂರು ವಿಭಾಗದ ಮುಖ್ಯ ಎಂಜಿನಿಯರ್ ಎನ್.ಎಂ.ಕೃಷ್ಣಮುನ್ನಿ, ಕೇಂದ್ರ ಕೃಷಿ ಸಚಿವಾಲಯದ (ರೈತ ಕಲ್ಯಾಣ) ತೋಟಗಾರಿಕಾ ಆಯುಕ್ತರು ಇತರೆ ಸದಸ್ಯರಾಗಿದ್ದಾರೆ. ರಾಷ್ಟ್ರೀಯ ಜಲ ಆಯೋಗದ ಮತ್ತೂಬ್ಬ ಮುಖ್ಯ ಎಂಜಿನಿಯರ್ ಎ.ಎಸ್. ಗೋಯೆಲ್ ಸಮಿತಿಯ ಸದಸ್ಯ ಕಾರ್ಯದರ್ಶಿ (ಹೆಚ್ಚುವರಿ ಜವಾಬ್ದಾರಿ) ಆಗಿರುತ್ತಾರೆ.