Advertisement

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

01:34 AM Apr 17, 2024 | Team Udayavani |

ಟೊರೊಂಟೊ (ಕೆನಡಾ): ಫಿಡೆ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ 10ನೇ ಸುತ್ತಿನ ಪಂದ್ಯದ ಬಳಿಕ ಭಾರತದ ಡಿ. ಗುಕೇಶ್‌ ಜಂಟಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.

Advertisement

ರಷ್ಯಾದ ಇಯಾನ್‌ ನೆಪೋಮ್ನಿಯಾಚ್ಚಿ ವಿರುದ್ಧ ಡ್ರಾ ಸಾಧಿಸಿರುವ ಗುಕೇಶ್‌, ಅವರೊಂದಿಗೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇಬ್ಬರಿಗೂ ತಲಾ 6 ಅಂಕ ಲಭಿಸಿದೆ. ಆರ್‌. ಪ್ರಜ್ಞಾನಂದ ಮತ್ತು ವಿದಿತ್‌ ಗುಜ್ರಾತಿ ನಡುವಿನ ಪಂದ್ಯ ಕೂಡ ಡ್ರಾದೊಂದಿಗೆ ಅಂತ್ಯ ಕಂಡಿತು.

ಫ್ರಾನ್ಸ್‌ನ ಫಿರೋಜ ಅಲಿರೆಝ ವಿರುದ್ಧ ಅಮೆರಿಕದ ಫ್ಯಾಬಿಯಾನೊ ಕರುವಾನ ಜಯ ಗಳಿಸಿದರು. ತಲಾ 5.5 ಅಂಕ ಗಳಿಸಿರುವ ಪ್ರಜ್ಞಾನಂದ, ಕರುವಾನ ಮತ್ತು ನಕಮುರ ದ್ವಿತೀಯ ಸ್ಥಾನದಲ್ಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next