ಚಂಡೀಗಢ: ಕಾರಿನಲ್ಲಿ ಕರ್ಕಶ ಸಂಗೀತ ಹಾಕಿದ್ದನ್ನು ಕಡಿಮೆ ಮಾಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ಗೂಂಡಾಗಳ ಗುಂಪೊಂದು ಕೆನಡಾ ನಿವಾಸಿಯೊಬ್ಬರನ್ನು ಹತ್ಯೆಗೈದ ಆಘಾತಕಾರಿ ಘಟನೆ ಪಂಜಾಬ್ ನಮೊಹಾಲಿ ಪ್ರದೇಶದಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ಕೆನಡಾ ದೇಶದ ಖಾಯಂ ನಿವಾಸಿ ಪ್ರದೀಪ್ ಸಿಂಗ್ (24 ವರ್ಷ) ಎನ್ನಲಾಗಿದೆ.
ಪ್ರದೀಪ್ ಸಿಂಗ್ ಹಾಗೂ ಸಹೋದರಿ ಕಳೆದ ಫೆಬ್ರವರಿ ತಿಂಗಳಲ್ಲಿ ಕೆನಡಾ ದಿಂದ ಪಂಜಾಬ್ ಗೆ ಬಂದಿದ್ದು ಗುರುದಾಸ್‌ಪುರದ ಗಜಿಕೋಟ್ ಗ್ರಾಮದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಅದರಂತೆ ಮಾರ್ಚ್ 6 ರ ರಾತ್ರಿ ಮೊಹಾಲಿಗೆ ತೆರಳಿದ ವೇಳೆ ಯುವಕರ ಗುಂಪೊಂದು ಕಾರಿನಲ್ಲಿ ಕರ್ಕಶ ಸಂಗೀತ ಹಾಕಿದ್ದರು ಇದರಿಂದ ಅಲ್ಲಿನ ಸಾರ್ವಜನಿಕರಿಗೂ ಕಿರಿಕಿರಿ ಆಗುತ್ತಿತ್ತು ಎನ್ನಲಾಗಿದೆ ಈ ವೇಳೆ ಪ್ರದೀಪ್ ಸಿಂಗ್ ಕಾರಿನಲ್ಲಿದ್ದ ಯುವಕರಲ್ಲಿ ಶಬ್ದ ಕಡಿಮೆ ಮಾಡುವಂತೆ ಹೇಳಿದ್ದ ಅಷ್ಟರಲ್ಲೇ ಯುವಕರ ಗುಂಪು ಪ್ರದೀಪ್ ಸಿಂಗ್ ವಿರುದ್ಧ ಜಗಳಕ್ಕೆ ಬಂದಿದ್ದಾರೆ ಜಗಳ ವಿಕೋಪಕ್ಕೆ ತೆರಳಿ ಯುವಕರ ಗುಂಪು ಪ್ರದೀಪ್ ಸಿಂಗ್ ಮೇಲೆ ಮರಣಾತಿಕವಾಗಿ ಹಲ್ಲೆ ನಡೆಸಿದೆ ಅಲ್ಲದೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾರೆ ಇದರಿಂದ ಗಂಭೀರ ಗಾಯಗೊಂಡ ಪ್ರದೀಪ್ ಅಸ್ವಸ್ಥಗೊಂಡು ಬಿದ್ದಿದ್ದಾನೆ ಅಷ್ಟರಲ್ಲೇ ಅಲ್ಲಿದ್ದ ಸಾರ್ವಜನಿಕರು ಮೊಹಾಲಿ ಪೊಲೀಸರಿಗೆ ದೂರು ನೀಡಿದ್ದಾರೆ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಬಂದ ವೇಳೆ ಅಸ್ವಸ್ಥ ಸ್ಥಿತಿಯಲ್ಲಿದ್ದ ಪ್ರದೀಪ್ ನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು ಅಷ್ಟೋತ್ತಿಗಾಗಲೇ ಪ್ರದೀಪ್ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ವೇಳೆ ಪ್ರದೀಪ್ ಸಿಂಗ್ ವಿರುದ್ಧ ಯಾವುದೇ ದ್ವೇಷ ಇರಲಿಲ್ಲ ಎಂದು ಹೇಳಿದ್ದಾನೆ, ಸದ್ಯ ಪೊಲೀಸರು ಇತರ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
ಇದನ್ನೂ ಓದಿ: ಕಾಂತಾರ ಕಾಳಜಿ; ರಿಷಬ್ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದ ಸಿಎಂ ಬೊಮ್ಮಾಯಿ