Advertisement

ನಾನು ”ಕಾಂತಾರ”ಚಿತ್ರ ನೋಡಿದೆ, ಅದೆಷ್ಟು ವಿಶಿಷ್ಟ… ; ಪುತ್ತೂರಿನಲ್ಲಿ ಅಮಿತ್ ಶಾ

05:21 PM Feb 11, 2023 | Team Udayavani |

ಪುತ್ತೂರು: ”ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ದಿಟ್ಟ ಸರಕಾರ ಪಿಎಫ್ ಐ ಬ್ಯಾನ್ ಮಾಡಿ ದೇಶದ್ರೋಹಿಗಳಿಗೆ ತಕ್ಕ ಉತ್ತರ ನೀಡಿತು. ಕರ್ನಾಟಕ ಸುರಕ್ಷಿತವಾಗಿರಬೇಕಾದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು” ಎಂದು ಶನಿವಾರ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಹೇಳಿದರು.

Advertisement

ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭೌಗೋಳಿಕ ಪ್ರದೇಶದಲ್ಲಿ ಕೃಷಿಯ ಮೂಲಕ ರೈತರು ಬೆವರಿಳಿಸಿ ಅಡಿಕೆ ಬೆಳೆಯುತ್ತಾರೆ. ಗುಜರಾತಿನ ಜನರು ಸುಪಾರಿ ತಿಂದು ಸಂಭ್ರಮಿಸುತ್ತಾರೆ. ನೀವು ಇಲ್ಲಿ ಕೃಷಿ ಮಾಡಿ ಬೆವರಿಳಿಸುತ್ತೀರಿ. ಅಲ್ಲಿ ಜನರು ಸುಪಾರಿ ತಿಂದು ಬೆವರಿಳಿಸುತ್ತಾರೆ” ಎಂದರು.

”ರೈತರಿಗೆ ಪ್ರಣಾಮ ಮಾಡಿ ನನ್ನ ಮಾತುಗಳನ್ನು ಆರಂಭಿಸುತ್ತೇನೆ. ಪುತ್ತೂರು ಬಹಳ ಪವಿತ್ರ ಭೂಮಿ , ಪರಶುರಾಮ ಸೃಷ್ಟಿಯಿಂದ ಇಡೀ ವಿಶ್ವದಲ್ಲಿ ವಿಖ್ಯಾತವಾಗಿದೆ. ನಾನು ಇತ್ತೀಚೆಗೆ ಚಿತ್ರ ಕಾಂತಾರ ನೋಡಿದೆ, ನಮ್ಮ ಪ್ರದೇಶ ಅದೆಷ್ಟು ವಿಶಿಷ್ಟ, ಸಮೃದ್ಧ ಪರಂಪರೆಯ ತಾಣ ಎಂದರು. ಪಶ್ಚಿಮ ಘಟ್ಟ, ಅರಬೀ ಸಮುದ್ರದ ನಡುವೆ ಇರುವ ನಾಡಿದು” ಎಂದರು.

ಮಂಗಳೂರು ರಸ್ತೆ, ನೀರು, ರೈಲು ಮತ್ತು ವಿಮಾನ ಸಂಪರ್ಕವನ್ನು ಹೊಂದಿರುವ ಕರ್ನಾಟಕದ ಏಕೈಕ ಸ್ಥಳವಾಗಿದ್ದು, ಇದು ವ್ಯಾಪಾರಿಗಳಿಗೆ ಸೂಕ್ತವಾದ ಸ್ಥಳವಾಗಿದೆ ಎಂದರು.

”ದೀನ ದಯಾಳ್ ಉಪಾಧ್ಯಾಯರನ್ನು ನೆನೆಸಿಕೊಂಡು ಅವರ ಅಂತ್ಯೋದಯದ ಕನಸನ್ನು ನನಸು ಮಾಡಲು ನಮ್ಮ ಸರಕಾರ ರೈತರಿಗೆ ಹಲವು ಯೋಜನೆಗಳನ್ನು ನೀಡುವ ಮೂಲಕ ಕೆಲಸ ಮಾಡುತ್ತಿದೆ” ಎಂದರು.

Advertisement

”ನಾನು ಸಾಧಕರಿಗೆ ಗೌರವ ಸಲ್ಲಿಸಲು ಬಂದಿದ್ದೇನೆ. ಆದರೆ ನನ್ನ ಪಕ್ಷದ ಕೆಲಸವನ್ನು ಮಾಡಬೇಕಾಗಿದೆ. ಹೇಳಬಹುದೇ ಎಂದರು. ಟಿಪ್ಪುವನ್ನು ಆರಾಧಿಸುವವರಿಗೆ ಮತ ನೀಡಬೇಡಿ. ರಾಣಿ ಅಬ್ಬಕ್ಕರನ್ನು ಆರಾಧಿಸುವ ಬಿಜೆಪಿಗೆ ಮತ ನೀಡಿ” ಎಂದರು.

”ಭ್ರಷ್ಟ ಕಾಂಗ್ರೆಸ್ ಪಕ್ಷದ ಸರಕಾರ ಬರಬಾರದು. ಜೆಡಿಎಸ್ ಮತ್ತು ಕಾಂಗ್ರೆಸ್ ಕರ್ನಾಟಕದ ಏಳಿಗೆಗೆ ಕೆಲಸ ಮಾಡುತ್ತಿಲ್ಲ. ಇಂದು ಇಡೀ ದೇಶದ ಜನರು ಯಡಿಯೂರಪ್ಪ ಅವರನ್ನು ಅವರ ರೈತ ಕಲ್ಯಾಣ ಮಾಡಿದ ಕೆಲಸ ಮಾಡಿದ್ದಕ್ಕಾಗಿ ನೆನಪಿಸಿಕೊಳ್ಳುತ್ತಾರೆ” ಎಂದರು.

”ಬಿಜೆಪಿಗೆ ಮತ ನೀಡುವುದು ನವ ಭಾರತ ನಿರ್ಮಾಣಕ್ಕೆ ಮತ ನೀಡಿದಂತೆ. ನಾನು ಚುನಾವಣ ಪ್ರಚಾರಕ್ಕೆ ಮತ್ತೆ ಬರುತ್ತೇನೆ. ಮನಬಿಚ್ಚಿ ಮಾತನಾಡುತ್ತೇನೆ” ಎಂದರು.

ರೈತರ ಪಾಲಿಗೆ ತಾಯಿ
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ಕ್ಯಾಂಪ್ಕೋ ಒಂದು ಯಶೋಗಾಥೆಯ ಕಥೆ, ಇದು ಮಾದರಿ ಸಂಸ್ಥೆ , ಸಂಸ್ಥಾಪಕರಾದ ಸುಬ್ರಾಯ ಭಟ್ ಸೇರಿ ಎಲ್ಲರನ್ನು ನೆನಪಿಸಿಕೊಳ್ಳುತ್ತೇನೆ. ಕೋಕೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿದಾಗ ಚಾಕಲೇಟ್ ಫ್ಯಾಕ್ಟರಿ ಮಾಡಿ ಇಡೀ ಭಾರತ ದೇಶದಲ್ಲಿ ಮಾದರಿ ಸಂಸ್ಥೆ ಎಂದರು. ರೈತರ ಪಾಲಿಗೆ ತಾಯಿಯ ಹಾಗೆ ಮಾರ್ಗದರ್ಶನ ಮಾಡುತ್ತಿದೆ ಎಂದರು. ಮೂರು ಸಾವಿರ ಹಣಕಾಸು ವ್ಯವಹಾರ ಮಾಡುತ್ತಿದೆ ಎಂದರು. ಬಿಳಿ ಚುಕ್ಕೆ ರೋಗ ಅಡಿಕೆ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ನಮ್ಮ ಸರಕಾರ ಅಡಿಕೆ ಬೆಳೆಗೆ 10 ಕೋಟಿ ರೂ. ಪ್ರೋತ್ಸಾಹ ಧನ ನೀಡಿದೆ. ರೈತರ ಸಮಸ್ಯೆಗೆ ಪರಿಹಾರ ನಾವೇ ಕೊಡುತ್ತೇವೆ ಎಂದರು. ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಅನುದಾನ ನೀಡುವುದಾಗಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಸುನಿಲ್ ಕುಮಾರ್. ಅಂಗಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next