ಮಂಗಳೂರು: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನವೆಂಬರ್‌ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ 36th ಚೇಂಬರ್ ಸಿಎ ಕೋಚಿಂಗ್ ಕ್ಲಾಸಸ್‌ನ ನಾಲ್ವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಉತ್ತೀರ್ಣರಾದ ಶ್ರೀಲಕ್ಷ್ಮೀ ಕಾಮತ್ ನಾಗರಮಠ ಅವರು ನಾಗರಮಠ ಗಣೇಶ್ ಕಾಮತ್ ಹಾಗೂ ಚೈತ್ರಾ ಜಿ. ಕಾಮತ್ ದಂಪತಿ ಪುತ್ರಿಯಾಗಿದ್ದು, ಮಂಗಳೂರಿನ ಸಿಎ ಪ್ರಸನ್ನ ಶೆಣೈ ಆ್ಯಂಡ್ ಕೊ. ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್‌ಶಿಪ್ ಮುಗಿಸಿರುತ್ತಾರೆ.
ಅಶ್ರಿತ ಕೆ.ವಿ. ಅವರು ವಸಂತ ಮತ್ತು ಉಮಾವತಿ ದಂಪತಿ ಪುತ್ರಿಯಾಗಿದ್ದು, ಶ್ರೀರಾಮುಲು ನಾೖಡು ಆ್ಯಂಡ್ ಕೊ. ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ಮುಗಿಸಿರುತ್ತಾರೆ.
ಸಂತೋಷ್ ಆಚಾರಿ ಅವರು ಗಂಗಾಧರ ಆಚಾರಿ ಮತ್ತು ಜಯಲಕ್ಷ್ಮೀ ಆಚಾರಿ ದಂಪತಿಯ ಪುತ್ರನಾಗಿದ್ದು ಸಿಎ ಅನ್ವೇಶ್ ಶೆಟ್ಟಿ ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ಮುಗಿಸಿರುತ್ತಾರೆ.
ವಾಣಿಶ್ರೀ ಅವರು ಶಂಕರ ಶೆಟ್ಟಿ ಮತ್ತು ಬೇಬಿ ಶೆಟ್ಟಿ ದಂಪತಿ ಪುತ್ರಿಯಾಗಿದ್ದು ಸಿಎ ಎಸ್.ಎಸ್. ನಾಯಕ್ ಅವರ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.