Advertisement

ಯುವ ಜೋಡಿಗಳ ಲವ್ಲಿ ಸ್ಟೋರಿ: ‘ಬೈ ಟು ಲವ್‌’ಟ್ರೇಲರ್‌ ಬಂತು

09:22 AM Feb 14, 2022 | Team Udayavani |

ನಟ ಧನ್ವೀರ್‌ ಹಾಗೂ ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಬೈ ಟು ಲವ್‌’ ಸಿನಿಮಾದ ಮೊದಲ ಟ್ರೇಲರ್‌ ಬಿಡುಗಡೆಯಾಗಿದೆ. ಸಿನಿಮಾದ ಟೈಟಲ್ಲೇ ಹೇಳುವಂತೆ, ಒಂದು ಲವ್‌ ಸ್ಟೋರಿ ಅದರ ಹಿಂದಿನ ಮುದ್ದಾಟ, ಕಿತ್ತಾಟ, ಫ್ಯಾಮಿಲಿ ಸೆಂಟಿಮೆಂಟ್‌, ಒಂದಷ್ಟು ಎಮೋಶನ್ಸ್‌, ಆ್ಯಕ್ಷನ್‌, ಕಾಮಿಡಿ ಹೀಗೆ ಎಲ್ಲ ಥರದ ಎಂಟರ್‌ಟೈನ್ಮೆಂಟ್‌ ಅಂಶಗಳಿರುವ ಸಣ್ಣ ಝಲಕ್‌ ಅನ್ನು “ಬೈ ಟು ಲವ್‌’ ಟ್ರೇಲರ್‌ನಲ್ಲಿ ತೆರೆದಿಡಲಾಗಿದೆ.

Advertisement

ಕ್ಲಾಸ್‌ ಮತ್ತು ಮಾಸ್‌ ಆಡಿಯನ್ಸ್‌ ಎರಡೂ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು “ಬೈ ಟು ಲವ್‌’ ಟ್ರೇಲರ್‌ ಬಿಡುಗಡೆ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ. “ಬೈ ಟು ಲವ್‌’ ಚಿತ್ರದ ತಾರಾಗಣ, ಲೊಕೇಶನ್ಸ್‌, ಮೇಕಿಂಗ್‌ ಮತ್ತು ತಾಂತ್ರಿಕ ಕೆಲಸಗಳು ಟ್ರೇಲರ್‌ನಲ್ಲಿ ಎದ್ದು ಕಾಣುತ್ತಿದ್ದು, ಮೊದಲ ನೋಟದಲ್ಲೇ “ಬೈ ಟು ಲವ್‌’ ಟ್ರೇಲರ್‌ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದೆ.

“ಕೆವಿಎನ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದು, ಹರಿ ಸಂತೋಷ್‌ ನಿರ್ದೇಶನವಿದೆ

Advertisement

Udayavani is now on Telegram. Click here to join our channel and stay updated with the latest news.

Next