Advertisement

ರೀ ರೆಕಾರ್ಡಿಂಗ್‌ನಲ್ಲಿ ಬ್ಯುಸಿಯಾದ “ಅನುಷ್ಕ’

11:15 AM Dec 05, 2018 | |

ಶ್ರೀನಂಜುಂಡೇಶ್ವರ ಪ್ರೊಡಕ್ಷನ್‌ ಹೌಸ್‌ ಲಾಂಛನದಲ್ಲಿ ಎಸ್‌.ಕೆ.ಗಂಗಾಧರ್‌ ಅವರು ನಿರ್ಮಿಸುತ್ತಿರುವ “ಅನುಷ್ಕ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚನ್ನೈನಲ್ಲಿ ಸಂಗೀತ ನಿರ್ದೇಶಕ ವಿಕ್ರಂ ಸೆಲ್ವ ನಿರ್ದೇಶನದಲ್ಲಿ ಲೈವ್‌ ರೀ-ರೆಕಾರ್ಡಿಂಗ್‌ ನಡೆಯುತ್ತಿದೆ.

Advertisement

ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಜೊತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ಸಂಗೀತ ತಂತ್ರಜ್ಞರು ಈ ಚಿತ್ರದ ಹಿನ್ನಲೆ ಸಂಗೀತಕ್ಕೆ ಕೆಲಸ ಮಾಡುತ್ತಿದ್ದಾರೆ. ದೇವರಾಜ್‌ ಕುಮಾರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೀನಸ್‌ ಮೂರ್ತಿ ಛಾಯಾಗ್ರಹಣ, ಶ್ರೀಧರ್‌ ಸಂಕಲನ ಕಾರ್ಯವಿದೆ.

ಅಶೋಕ್‌, ಸಿದ್ಧರಾಜು, ನರಸಿಂಹ, ಚಂದ್ರು ಸಾಹಸ ನಿರ್ದೇಶನ, ಅನ್‌ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್‌ ಕಲಾ ನಿರ್ದೇಶನರುವ ಈ ಚಿತ್ರದ ತಾರಾಬಳಗದಲ್ಲಿ ಸಾಧುಕೋಕಿಲ, ರೂಪೇಶ್‌ ಶೆಟ್ಟಿ, ಅಮೃತ ಅಯ್ಯಂಗಾರ್‌, ರೂಪ ಶರ್ಮ, ಬಾಲರಾಜ್‌, ಆದಿ ಲೋಕೇಶ್‌ ಮುಂತಾದವರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next