Advertisement
ಜಿಎಸ್‌ಟಿ ಬಗ್ಗೆ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಪರಿಪೂರ್ಣ ಮಾಹಿತಿ ದೊರೆಯದ ಕಾರಣ ಹಳೆ ದರದಲ್ಲಿ ವ್ಯಾಪಾರ ನಡೆಸುತ್ತಿದ್ದು, ಮಾರುಕಟ್ಟೆಗಳಲ್ಲಿ ಜಿಎಸ್‌ಟಿ ಜಾರಿಯಿಂದ ಯಾವುದೇ ಪರಿಣಾಮ ಬೀರಿಲ್ಲ. ನಗರದ ವಿವಿಧ ಅಂಗಡಿ, ಶೋ ರೂಂ ಮತ್ತು ಹೋಟೆಲ್‌ಗಳಿಲ್ಲಿ ಮೊದಲಿದ್ದ ಬೆಲೆಗಳಿಗೆ ಗ್ರಾಹಕರು ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಜಿಎಸ್‌ಟಿ ತೆರಿಗೆ ನಿಯಮ ತಿಳಿಯದೆ ಯಾವ ವಸ್ತುವಿಗೆ ಎಷ್ಟು ತೆರಿಗೆ ಹೆಚ್ಚಿಸ ಬೇಕು. ಎಷ್ಟು ಕಡಿಮೆ ಮಾಡಬೇಕೆಂಬುದುಇನ್ನೂ ನಿಖರವಾಗಿ ಗೊತ್ತಾಗುತ್ತಿಲ್ಲ. ಹೀಗಾಗಿ ಮೊದಲಿದ್ದ ಬೆಲೆಗೆ ಎಲ್ಲ ಸರಕು, ಸಾಮಗ್ರಿ ಮಾರಾಟ ಮಾಡುತ್ತಿದ್ದೇವೆ ಎಂದು ಅಂಗಡಿ ಮಾಲೀಕರು ಸ್ಪಷ್ಟ ಪಡಿಸಿದ್ದಾರೆ.
ಟಿಯಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ವರ್ತಕರ ಸಂಘದ ಅಧ್ಯಕ್ಷ ಜಗನ್ನಾಥರೆಡ್ಡಿ ಪತ್ರಿಕೆಗೆ ತಿಳಿಸಿದ್ದಾರೆ.
ಹೋಟಲ್‌ಗಳಿಲ್ಲಿ ಗ್ರಾಹಕರು ಎಂದಿನಂತೆ ಕಂಡು ಬಂದಿದ್ದು, ಜಿಎಸ್‌ಟಿ ನಂಬರ್ ಪಡೆದಿದ್ದೇವೆ. ಆದರೆ ಗ್ರಾಹಕರ ಮೇಲೆ
ಜಿಎಸ್‌ಟಿ ತೆರಿಗೆ ಹಾಕಿಲ್ಲ. ಹಳೆ ಬೆಲೆಗೆ ತಿಂಡಿ, ಊಟ ನೀಡಲಾಗುತ್ತಿದೆ ಎಂದು ಎಸ್‌ಎಲ್‌ವಿ ಹೋಟೆಲ್ ಮಾಲೀಕ ಸಂತೋಷ ಶೆಟ್ಟಿ ತಿಳಿಸಿದ್ದಾರೆ. ದೇಶಾದ್ಯಂತ ಶೇ. 18ರಷ್ಟು ಏಕ ರೂಪದ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ್ದರಿಂದ ಬೆಲೆಗಳು
ಏರಿಕೆಯಾಗಿವೆ. ಆದರೆ ವ್ಯಾಪಾರಸ್ಥರು ಮಾತ್ರ ಗ್ರಾಹಕರ ಮೇಲೆ ತೆರಿಗೆ ಹೊರೆ ಹಾಕದೆ ಹಳೆ ಬೆಲೆಗಳಲ್ಲಿ ವಸ್ತುಗಳು ಮಾರಾಟ ಮಾಡುತ್ತಿದ್ದಾರೆ. ತೆರಿಗೆ ಹೊರೆ ಹಾಕಿದರೆ ವ್ಯಾಪಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆಗಳಿವೆ ಎಂದು ವ್ಯಾಪಾರಸ್ಥರು ಅಭಿಪ್ರಾಯ ಆಗಿದೆ.
Related Articles
ಸರಕು ಹಾಗೂ ಸೇವಾ ತೆರಿಗೆಯಿಂದ ಜಿಲ್ಲೆಯ ವ್ಯಾಪಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಳೆ ದರದಲ್ಲಿ ವ್ಯಾಪಾರ ನಡೆಯುತ್ತಿದೆ. ಇನ್ನೂ ವ್ಯಾಪಾರಸ್ಥರು ಸಹ ಗ್ರಾಹಕರ ಮೇಲೆ ಜಿಎಸ್‌ಟಿ ತೆರಿಗೆ ಹೇರಿಲ್ಲ ಇದರಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗಿಲ್ಲ.
ಹನುಮಾನದಾಸ್ ಮುಂದಡಾ, ಅಧ್ಯಕ್ಷರು, ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆ, ಯಾದಗಿರಿ
Advertisement