Advertisement
ಶನಿವಾರ ಸಚಿವರ ಸಮಿತಿಯ ಸಭೆ ನಡೆದಿದ್ದು, ಜೀವ ವಿಮೆ ಹಾಗೂ ಹಿರಿಯ ನಾಗರಿಕರ ಆರೋಗ್ಯ ವಿಮೆಗಳನ್ನು ಜಿಎಸ್ಟಿಯಿಂದ ಹೊರಗಿಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಇಷ್ಟಾಗಿಯೂ 5 ಲಕ್ಷ ರೂ.ಗಳಿಗಿಂತ ಹೆಚ್ಚಿರುವ ಆರೋಗ್ಯ ವಿಮೆಯ ಕಂತಿನ ಮೇಲೆ ವಿಧಿಸಲಾಗುವ ಶೇ. 18 ಜಿಎಸ್ಟಿಯನ್ನು ಮುಂದುವರಿಸುವ ಸಾಧ್ಯತೆ ಇದೆ.ಜಿಎಸ್ಟಿ ಪರಿಷ್ಕರಣೆಯಿಂದ ಸುಮಾರು 22,000 ಕೋ.ರೂ. ಆದಾಯವನ್ನು ನಿರೀಕ್ಷಿಸಲಾಗಿದ್ದು, ಜೀವ ವಿಮೆಗಳ ಮೇಲಿನ ಜಿಎಸ್ಟಿ ಇಳಿಕೆಯಿಂದ ರಾಜ್ಯಗಳಿಗೆ ಉಂಟಾಗುವ ನಷ್ಟವನ್ನು ಇದು ಸರಿದೂಗಿಸಲಿದೆ ಎನ್ನಲಾಗಿದೆ. ಮುಂದಿನ ತಿಂಗಳು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಲಿರುವ ಜಿಎಸ್ಟಿ ಮಂಡಳಿಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
20 ಲೀ. ಮತ್ತು ಅದಕ್ಕೂ ಹೆಚ್ಚಿನ ಪ್ಯಾಕೇಜ್x ಕುಡಿಯುವ ನೀರನ್ನು ಶೇ. 18ರ ಬದಲಿಗೆ ಶೇ. 5ರ ಜಿಎಸ್ಟಿ ಸೇರಿಸುವ ಪ್ರಸ್ತಾವವಿದೆ. ಹಾಗೆಯೇ 10 ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯ ಬೈಸಿಕಲ್ ಹಾಗೂ ನೋಟ್ಬುಕ್ಗಳನ್ನು ಕೂಡ ಶೇ. 12ರಿಂದ ಶೇ. 5 ಜಿಎಸ್ಟಿ ವರ್ಗಕ್ಕೆ ಸೇರಿಸುವ ಪ್ರಸ್ತಾವವಿದೆ. ಯಾವುದು ತುಟ್ಟಿ?
15 ಸಾವಿರ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಜೋಡಿ ಶೂ, 25 ಸಾವಿರ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಕೈಗಡಿಯಾರಗಳನ್ನು ಶೇ. 18ರಿಂದ ಶೇ. 28 ಜಿಎಸ್ಟಿಗೆ ವರ್ಗಕ್ಕೆ ಸೇರಿಸುವ ಪ್ರಸ್ತಾವವಿದೆ.