ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರ ಹಿನ್ನಲೆ ನಗರದಿಂದ ಹೊರಡುವ ಬಸ್ಸುಗಳು ಬಹುತೇಕ ಸ್ಥಗಿತಗೊಂಡಿದ್ದು, ಬಸ್ಸುಗಳಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು, ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗ್ಗಿಯಿಂದಲೇ ನೌಕರರು ಕರ್ತವ್ಯದಿಂದ ದೂರ ಉಳಿದಿದ್ದಾರೆ. ಬೇರೆ ಜಿಲ್ಲೆಗಳಿಂದ ಬಂದ ಬಸ್ಸುಗಳು ಮಾತ್ರ ಹೋಗಿದ್ದು, ಹುಬ್ಬಳ್ಳಿಯಿಂದ ಆರಂಭವಾಗಬೇಕಾದ ಬಸ್ಸುಗಳು ನಿಲ್ದಾಣಕ್ಕೆ ಆಗಮಿಸಿಲ್ಲ. ನಗರ ಸಾರಿಗೆ ಬಸ್ಸುಗಳು ಒಂದಿಷ್ಟು ಸಂಚಾರ ಮಾಡುತ್ತಿದ್ದು, ಕೆಲ ಸಾರಿಗೆ ನೌಕರರು ಇದಕ್ಕೂ ಅಡ್ಡಿಪಡಿಸಿ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ನೌಕರರ ಪ್ರತಿಭಟನೆ: ಸಾರಿಗೆ ನೌಕರರ ಬಂಧನ ಹಾಗೂ ಸರಕಾರದ ನಿರ್ಲಕ್ಷ್ಯ ಖಂಡಿಸಿ ನಗರದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದರು. ಸರಕಾರ ನಮ್ಮ ಬೇಡಿಕೆ ಈಡೇರಿಸದ ಹೊರತು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಸಾರಿಗೆ ನೌಕರರ ಮುಷ್ಕರದಿಂದ ಬಸ್ ಸಂಚಾರ ಸ್ಥಗಿತ : ಪ್ರಯಾಣಿಕರ ಪರದಾಟ
ಬಂದ್ ಕುರಿತು ಯಾವುದೇ ಮಾಹಿತಿಯಿಲ್ಲದ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ನಿಲ್ದಾಣದಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಆರಂಭವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಕೆಲವರು ಕಾಯುತ್ತಿದ್ದರೆ ಇನ್ನೂ ಕೆಲವರು ವಾಪಸ್ಸು ತೆರಳುತ್ತಿದ್ದಾರೆ.
ಈಡೇರದ ಪ್ರಯತ್ನ: ಶತಾಯಗತಾಯ ಬಸ್ಸುಗಳನ್ನು ಸಂಚಾರ ಮಾಡಲು ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿಲ್ದಾಣಕ್ಕೆ ಆಗಮಿಸಿದ್ದರು. ಸಿಬ್ಬಂದಿ ಮನವೊಲಿಸುವ ಅಧಿಕಾರಿಗಳ ಪ್ರಯತ್ನ ವಿಫಲಗೊಂಡಿದ್ದು, ನೌಕರರು ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು ಹಾಕಿದ್ದು, ನಿಲ್ದಾಣಗಳು ಬಿಕೋ ಎನ್ನುತ್ತಿವೆ.