Advertisement
ಸೆ. 24 ರಂದು ಕುರ್ಲಾ ಪೂರ್ವದ ಬಂಟರ ಸಂಘದ ಅನೆಕ್ಸ್ ಕಟ್ಟಡದಲ್ಲಿನ ಲತಾ ಪ್ರಭಾಕರ್ ಎಲ್. ಶೆಟ್ಟಿ ಮತ್ತು ಕಬೆತಿಗುತ್ತು ಕಶಿ ಸಿದ್ಧು ಶೆಟ್ಟಿ ಸಭಾಗೃಹದಲ್ಲಿ ನಡೆದ ಬಂಟ್ಸ್ ನ್ಯಾಯ ಮಂಡಳಿಯ 18ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡಳಿಯ ಸೇವಾಕಾರ್ಯಗಳಿಗೆ ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.
ಕಾರ್ಯಧ್ಯಕ್ಷ ರವೀಂದ್ರ ಅರಸ ಅವರು ಬಂಟರ ಹಿರಿಯ ಧುರೀಣ ಎಂ. ಡಿ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪದ್ಮನಾಭ ಪಯ್ಯಡೆ, ಸುಭಾಷ್ ಶೆಟ್ಟಿ, ಹಿರಿಯ ಉದ್ಯಮಿ ಸುಧೀರ್ ವಿ. ಶೆಟ್ಟಿ, ಲತಾ ಪಿ. ಭಂಡಾರಿ, ಬಂಟರವಾಣಿ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ, ಸಿಎ ಸುರೇಂದ್ರ ಎ. ಶೆಟ್ಟಿ, ಸಿಎ ಸಂಜೀವ ಶೆಟ್ಟಿ ಮತ್ತಿತರ ಗಣ್ಯರನ್ನು ಪುಷ್ಪಗುತ್ಛವನ್ನಿತ್ತು ಅಭಿವಂದಿಸಿದರು. ಸಭಿಕರಲ್ಲಿನ ಬೊಳ್ಯಗುತ್ತು ವಿವೇಕ್ ಶೆಟ್ಟಿ, ಸುಧೀರ್ ವಿ. ಶೆಟ್ಟಿ, ಮುಂಡಪ್ಪ ಎಸ್. ಪಯ್ಯಡೆ, ದಿವಾಕರ್ ಶೆಟ್ಟಿ ಇಂದ್ರಾಳಿ, ಮಂಡಳಿಯ ಸಲಹಾ ಮಂಡಳಿ ಸದಸ್ಯರಾದ ಆರ್. ಸಿ. ಶೆಟ್ಟಿ, ಸೀತರಾಮ ಎಂ. ಶೆಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
Related Articles
Advertisement
18 ವರ್ಷಗಳ ಸೇವೆಯನ್ನು ಪೂರೈಸಿದ ನ್ಯಾಯ ಮಂಡಳಿ ಬಂಟರ ಹೆಗ್ಗಳಿಕೆಯಾಗಿದೆ. ಜಸ್ಟೀಸ್ ಸಂತೋಷ್ ಹೆಗ್ಡೆ ಅವರ ಸಮಾಜ ಪ್ರಿಯ ಚಿಂತನೆ, ಕಲ್ಪನೆ, ಆಶಯ ಸಮಾ ಜದ ಜನತೆಯಲ್ಲಿ ನ್ಯಾಯ ಒದಗಿಸಿದೆ. ಸುಮಾರು 350 ಅಧಿಕ ಕೇಸುಗಳನ್ನು ಕೈಗೆತ್ತಿ ನಾವು ಪರಿಹರಿಸಿದ್ದೇವೆ. ಇದು ಎಲ್ಲರ ಒಗ್ಗಟ್ಟಿನ ಕೆಲಸವಾಗಿದೆ.ತೀರ್ಪು-ತೀರ್ಮಾನ ನೀಡುವುದು ಬಂಟರಿಗೆ ವಂಶ ಪಾರಂಪರಿಕವಾಗಿ ಬಂದ ವರವಾಗಿದೆ.– ಪದ್ಮನಾಭ ಎಸ್. ಪಯ್ಯಡೆ ,
ಅಧ್ಯಕ್ಷರು : ಬಂಟರ ಸಂಘ ಮುಂಬಯಿ ಬಂಟ್ಸ್ ನ್ಯಾಯ ಮಂಡಳಿ ಸಮಾಜದ ಜನತೆಗೆ ಲಾಭವಾಗಿಯೆ ಪರಿಣಮಿಸಿದೆ. ಇದೊಂದು ಬುದ್ಧಿ ಜೀವಿಗಳ ಸಂಸ್ಥೆ ಎನ್ನುವುದರಲ್ಲಿ ಸಂಶಯವಿಲ್ಲ. ನ್ಯಾಯಕ್ಕೆ ಅನುಭವಸ್ಥ ಹಿರಿಯ ವ್ಯಕ್ತಿಗಳ ಬುದ್ಧಿವಾದ ಅಗತ್ಯವಾಗಿದ್ದು, ಅವರ ಚಿಂತನೆಯಿಂದಲೇ ಸಮರ್ಥ ನ್ಯಾಯ ಸಾಧ್ಯ. ನಮ್ಮೊಳಗಿನ ಇಂತಹ ಮಂಡಳಿಯ ಸೇವೆ ಸಮಾಜಕ್ಕೆ ಮತ್ತು ಇತರರೂ ಅನುಕರಿಸಲಿ.
– ನ್ಯಾಯವಾದಿ ಸುಭಾಶ್ ಶೆಟ್ಟಿ ,
ಅಧ್ಯಕ್ಷರು : ಬೋಂಬೆ ಬಂಟ್ಸ್ ಅಸೋಸಿಯೇಶನ್ ಎಂ. ಡಿ. ಶೆಟ್ಟಿ ಅವರು ಕೇವಲ ಬಂಟರಿಗೆ ಮಾತ್ರವಲ್ಲ ಸಮಗ್ರ ಸಮಾಜಕ್ಕೆ ಮಾದರಿ ವ್ಯಕ್ತಿ. ಅವರ ಸಮಾಜದ ಮೇಲಿನ ಪ್ರೀತಿ ಎಲ್ಲರಿಗೂ ಆದರ್ಶನೀಯ. ಬಂಟರಲ್ಲಿ ಕಡಂದಲೆ ಪ್ರಕಾಶ್ ಶೆಟ್ಟಿ ಅವರಂತಹ ಸಾಹಸಿಗ ವಕೀಲರು, ನಿಷ್ಠೆಯಿಂದ ಸಮಾಜವನ್ನು ನಡೆಸುವ ಅರಸರೂ ಇದ್ದಾರೆ ಅಂದ ಮೇಲೆ ನ್ಯಾಯ ಮಂಡಳಿ ಸೇವೆ ಬಗ್ಗೆ ಎರಡು ಮಾತಿಲ್ಲ. ಆದ್ದರಿಂದಲೇ ಬಂಟ್ಸ್ ಸಂಘದ ನ್ಯಾಯ ಮಂಡಳಿ ವಿಶ್ವಕ್ಕೇ ಮಾದರಿ. ನ್ಯಾಯ ಮಂಡಳಿಯು ಬಂಟ್ಸ್ ಸಂಘದಲ್ಲೇ ಕೇಂದ್ರ ಕಚೆೇರಿ ಹೊಂದಿ ದೇಶಾದಾದ್ಯಂತ ಶಾಖೆಗಳು ವಿಸ್ತಾರಿಸುವಂತಾಗಲಿ
– ಐಕಳ ಹರೀಶ್ ಶೆಟ್ಟಿ ,
ಅಧ್ಯಕ್ಷರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ ಚಿತ್ರ-ವರದಿ: ರೋನ್ಸ್ ಬಂಟ್ವಾಳ್