Advertisement
ಜ್ಯೋತಿ ಕಡೆಯಿಂದ ಕರಂಗಲ್ಪಾಡಿ ಕಡೆಗೆ ಬರುವಲ್ಲಿ ಸರ್ಕಲ್ ಸಮೀಪ (ಎಸ್ಸೆಲ್ ಟವರ್ ಅಕ್ಕಪಕ್ಕ) ಫುಟ್‌ಪಾತ್ ಇಲ್ಲ. ಮಾತ್ರವಲ್ಲ, ರಸ್ತೆಯ ಅಂಚಿನಲ್ಲಿ ನಡೆದಾಡುವುದು ಕೂಡ ಕಷ್ಟಕರವಾಗಿದೆ. ರಸ್ತೆಯ ಅಂಚು ಸಮತಟ್ಟಾಗಿಲ್ಲ. ಇರುವ ಸ್ವಲ್ಪ ಜಾಗದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತದೆ. ಹಾಗಾಗಿ ಇದು ತೀರಾ ಇಕ್ಕಟ್ಟಿನಿಂದ ಕೂಡಿದ ಸ್ಥಳವಾಗಿ ಮಾರ್ಪಟ್ಟಿದೆ. ಜ್ಯೋತಿ ಕಡೆಯಿಂದ ಪಿವಿಎಸ್ ಕಡೆಗೆ ಬರುವ ವಾಹನಗಳು ಇಲ್ಲಿ ತಿರುವು ಪಡೆದುಕೊಳ್ಳುವಾಗ ತೀರಾ ರಸ್ತೆಯ ಅಂಚಿನಲ್ಲಿಯೇ ಸಾಗುತ್ತವೆ. ಹಾಗಾಗಿ ಇಲ್ಲಿ ನಡೆದುಕೊಂಡು ಹೋಗುವವರಿಗೆ ವಾಹನ ಢಿಕ್ಕಿಯಾಗುವ ಅಪಾಯ ಎದುರಾಗುತ್ತಿದೆ. ಇದರ ಎದುರು ಭಾಗದಲ್ಲಿ ಕೂಡ ಸುರಕ್ಷಿತವಾಗಿ ನಡೆದಾಡಲು ಫುಟ್‌ಪಾತ್ ಇಲ್ಲ.
ಸದಾ ವಾಹನಗಳ ದಟ್ಟಣೆ ಇರುವ ಈ ಸ್ಥಳದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಪಕ್ಕದಲ್ಲೇ ಬಸ್‌ಗಳ ತಂಗುದಾಣ ಕೂಡ ಇವೆ. ಇಲ್ಲಿ ಫುಟ್‌ಪಾತ್ ಇಲ್ಲದಿರುವುದರಿಂದ ಹಿರಿಯ ನಾಗರಿಕರು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚು. ಲಭ್ಯ ಜಾಗವನ್ನು ಬಳಸಿಕೊಂಡು ಫುಟ್‌ಪಾತ್ ನಿರ್ಮಿಸುವ ಅಗತ್ಯವಿದೆ. ಇದಕ್ಕೂ ಮೊದಲು ಇಲ್ಲಿನ ರಸ್ತೆಯ ಅಂಚುಗಳಲ್ಲಿ ಉಂಟಾಗಿರುವ ಹೊಂಡಗಳನ್ನು ಮುಚ್ಚಿ ಸಮತಟ್ಟುಗೊಳಿಸಬೇಕಾದ ಆವಶ್ಯಕತೆ ಇದೆ.