Advertisement
ಹಾಸ್ಟೆಲ್‌ನ ಕೊಠಡಿಗಳಿಗೆ ತೆರಳಿ ಪರಿಶೀಲನೆ ನಡೆಸಿ ಅಲ್ಲಿನ ವ್ಯವಸ್ಥೆಗಳ ಕುರಿತಂತೆ ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದರು. ಇದಕ್ಕೂ ಮೊದಲು ಅಡುಗೆ ಕೋಣೆ, ಸ್ಟೋರ್ ರೂಮ್‌ಗಳಿಗೆ ಭೇಟಿ ನೀಡಿ ತಯಾರಿಸಿರುವ ಅಡುಗೆ, ತರಕಾರಿ, ಬೇಳೆ ಕಾಳು ಇತ್ಯಾದಿಗಳನ್ನು ಪರಿಶೀಲಿಸಿದರು. ಉತ್ತಮ ದರ್ಜೆಯ ಅಕ್ಕಿ, ಬೇಳೆ ಇತ್ಯಾದಿಗಳನ್ನು ಖರೀದಿಸಿ ಆಡುಗೆಗೆ ಉಪಯೋಗಿಸುವಂತೆ ನಿರ್ದೇಶನ ನೀಡಿದರು.
Related Articles
Advertisement
ನಿಮ್ಮ ಮಕ್ಕಳಂತೆ ನೋಡಿಕೊಳ್ಳಿಹಾಸ್ಟೆಲ್ನಲ್ಲಿರುವ ಮಕ್ಕಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ. ಯಾರ ಬಗ್ಗೆಯೂ ತಾರತಮ್ಯ ಬೇಡ. ಆಹಾರದಲ್ಲಿಯೂ ತಾರತಮ್ಯ ಮಾಡುವುದು ಬೇಡ. ಮುಂದೊಂದು ದಿನ ಅವರು ದೊಡ್ಡ ಅಧಿಕಾರಿಗಳಾಗಿ ಬಂದಾಗ ನೀವು ಏನಾದರೂ ಎದುರಲ್ಲಿ ಸಿಕ್ಕಿದರೆ ಕರೆದು ಮಾತನಾಡಿಸುತ್ತಾರಲ್ಲ…ಎಷ್ಟು ಕೋಟಿ ರೂ. ಕೊಟ್ಟರೂ ಅಂತಹ ಸಂತೋಷ ಸಿಗಲು ಸಾಧ್ಯವಿಲ್ಲ ಎಂದು ವಾರ್ಡನ್ ಮತ್ತು ಹಾಸ್ಟೆಲ್ ಸಿಬಂದಿಗೆ ಉಪ ಲೋಕಾಯುಕ್ತರು ವಿವರಿಸಿದರು. ಲೋಕಾಯುಕ್ತ ನಂಬರ್ ಅಳವಡಿಸಿ ಹಾಸ್ಟೆಲ್‌ನಲ್ಲಿ ಲೋಕಾಯುಕ್ತ ದೂರವಾಣಿ ಸಂಖ್ಯೆಗಳನ್ನು ಅಳವಡಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ನಿರ್ದೇಶಿಸಿದರು. ಯಾವುದೇ ಸಮಸ್ಯೆಗಳು ಉಂಟಾದರೆ ಲೋಕಾಯುಕ್ತವನ್ನು ಸಂಪರ್ಕಿಸಬಹುದು ಎಂದು ಅವರು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು. ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಲೋಕಾಯುಕ್ತ ಎಸ್. ಪಿ. ನಟರಾಜ್, ಡಿವೈಎಸ್‌ಪಿ ಡಾ| ಗಾನಾ ಪಿ.ಕುಮಾರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ್ ಅಡಿಗ, ಲೋಕಾಯುಕ್ತ ಅಧಿಕಾರಿ, ಸಿಬಂದಿ ಉಪಸ್ಥಿತರಿದ್ದರು. ಸ್ಟೋರ್ ರೂಮ್‌ನಲ್ಲಿ 5-6 ಸಿಲಿಂಡರ್!
ಮೆಟ್ರಿಕ್ ಪೂರ್ವ ಹಾಸ್ಟೆಲ್‌ನ ಸ್ಟೋರ್ ರೂಮ್ ನಲ್ಲಿ 5-6 ತುಂಬಿದ ಗ್ಯಾಸ್ ಸಿಲಿಂಡರ್‌ಗಳನ್ನು ಇಟ್ಟಿರುವುದನ್ನು ಗಮನಿಸಿದ ಉಪ ಲೋಕಾಯುಕ್ತರು ನ್ಯಾಯಮೂರ್ತಿಗಳು ಅವುಗಳನ್ನು ಹೊರಗಡೆ ಇರುವಂತೆ ವಾರ್ಡನ್‌ಗೆ ಸೂಚಿಸಿದರು. ನೂರಾರು ಮಂದಿ ಮಕ್ಕಳಿರುವ ಹಾಸ್ಟೆಲ್‌ನಲ್ಲಿ ಸಿಲಿಂಡರ್‌ಗಳನ್ನು ಒಳಗೆ ಇಡುವುದು ಅಪಾಯಕಾರಿಯಾಗಿದ್ದು, ಹೊರಗೆ ಪ್ರತ್ಯೇಕ ಸ್ಥಳದಲ್ಲಿ ಇರಿಸುವಂತೆ ನಿರ್ದೇಶಿಸಿದರು. ವೆನ್ಲಾಕ್ ಆಸ್ಪತ್ರೆಗೆ ಭೇಟಿ, ಪರಿಶೀಲನೆ
ಮಂಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ರವಿವಾರ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗಳಿಗೆ ಭೇಟಿ
ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲಿಸಿದರು. ಆಸ್ಪತ್ರೆಯ ವಿವಿಧ ವಾರ್ಡುಗಳಿಗೆ ಭೇಟಿ ನೀಡಿದ ಅವರು, ರೋಗಿಗಳು, ರೋಗಿಗಳ ಕಡೆಯವರೊಂದಿಗೆ ಆಸ್ಪತ್ರೆಯ ಸಿಗುವ ಸೇವೆ, ಸೌಲಭ್ಯ ಮತ್ತು ಉಪಚಾರಗಳ ಕುರಿತಂತೆ ಅಹವಾಲು ಆಲಿಸಿದರು. ಆಸ್ಪತ್ರೆಯ ಔಷಧ ದಾಸ್ತಾನು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಪಲೋಕಾಯುಕ್ತರು, ಮಕ್ಕಳ ಆಸ್ಪತ್ರೆಗೂ ಭೇಟಿ ನೀಡಿದರು. ಆಸ್ಪತ್ರೆಯ ಶೌಚಾಲಯಕ್ಕೂ ಭೇಟಿ ನೀಡಿದ ಅವರು, ಅಲ್ಲಿನ ಅಬÂವಸ್ಥೆಯ ಕುರಿತಂತೆ, ಸ್ವಚ್ಚತೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹೊರಗಡೆಯಿಂದ
ಔಷಧ ತರಿಸುವಂತಿಲ್ಲ
ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹೊರಗಡೆಯಿಂದ ಔಷಧ ತರಲು ಹೇಳುವಂತಿಲ್ಲ. ಆಸ್ಪತ್ರೆಗಳು ಹೊರಗಿ ನಿಂದ ಔಷಧ ಖರೀದಿಸಲು ಸರಕಾರ ದಿಂದ ಹಣ ನೀಡಲಾಗುತ್ತದೆ ಎಂದು ಉಪಲೋಕಾಯುಕ್ತರು ಹೇಳಿದರು. ಡಿಸಿ ಮುಲ್ಲೈ ಮುಗಿಲನ್, ಜಿ.ಪಂ.ಸಿಇಒ ಡಾ| ಆನಂದ್, ವೆನ್ಲಾಕ್ ಅಧೀಕ್ಷಕ ಡಾ| ಶಿವಕುಮಾರ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು. ಹಳೆಯಂಗಡಿ ಗ್ರಾ. ಪಂ.ಗೆ ಭೇಟಿ
ಮೂಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಸಂಜೆ ವೇಳೆ ದಿಢೀರ್ ಭೆ àಟಿ ನೀಡಿ ಕಚೇರಿಯ ಕಡತಗಳನ್ನು ಪರಿಶೀಲನೆ ನಡೆಸಿದರು. ಈ ಪಂಚಾಯತ್‌ಗೆ ಸಂಬಂಧಿಸಿ ಬಹಳಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಆರೋಗ್ಯಕರ ಮಾಹಿತಿ ದೊರೆಯದೇ ಕಚೇರಿಯ ನಿರ್ವಹಣೆ
ಯಲ್ಲಿ ಹಲವು ದೋಷಗಳು ಕಂಡು ಬಂದಿದೆ ಎಂದು ಉಪ ಲೋಕಾಯುಕ್ತ ವೀರಪ್ಪ ಅವರು ತಿಳಿಸಿದರು. ಪಂಚಾಯತ್‌ನ ಕೆಲವು ಮಾಹಿತಿಗಳನ್ನು ಮೂಲ್ಕಿ ತಾ. ಪಂ. ಇ.ಒ. ಅವರಲ್ಲಿ ಕೇಳಿದಾಗಲೂ ಸಮಂಜಸ ಉತ್ತರ ಬರಲಿಲ್ಲ. ಸೋಮವಾರ ನಡೆಯುವ ಸಭೆಗೆ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಲೋಕಾಯುಕ್ತರು ತಿಳಿಸಿದ್ದಾರೆ ಎನ್ನಲಾಗಿದೆ.