Advertisement

Perdoor; ಶಾಂತಾರಾಮ ಸೂಡ ಪೆರ್ಡೂರಿನ ಆಸ್ತಿ: ಕೆ. ಪ್ರಕಾಶ್‌ ಶೆಟ್ಟಿ

11:40 PM Feb 11, 2024 | Team Udayavani |

ಹೆಬ್ರಿ: ಸರಳತೆ ಮತ್ತು ಸಂಘಟನ ಚತುರತೆಯ ಮೂಲಕ ಹೃದಯ ಶ್ರೀಮಂತಿಕೆ ಮೆರೆದ ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಶಾಂತಾರಾಮ ಸೂಡ ಅವರು ಪೆರ್ಡೂರಿನ ಆಸ್ತಿಯಾಗಿದ್ದು ಅವರ ಮುಂದಾಳತ್ವದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಭವ್ಯವಾದ ಸಮುದಾಯ ಭವನ ತಲೆ ಎತ್ತಿ ನಿಂತಿರುವುದು ಶ್ಲಾಘನೀಯ ಎಂದು ಬೆಂಗಳೂರು ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಕೆ. ಪ್ರಕಾಶ್‌ ಶೆಟ್ಟಿ ಹೇಳಿದರು.

Advertisement

ಬಂಟರ ಸಂಘ ಪೆರ್ಡೂರು ಮಂಡಲದಿಂದ ನಿರ್ಮಾಣಗೊಂಡ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಭಾಭವನವನ್ನು ಉದ್ಘಾಟಿಸಿದ ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ಮಾತನಾಡಿ ಈ ಭವನ ಕೇವಲ ಬಂಟ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲ ಸಮುದಾಯದವರಿಗೂ ಅವಕಾಶ ನೀಡಿರುವುದು ಶ್ಲಾಘನೀಯ ಎಂದರು.

ಪ್ರತಿ ಮನೆಗೆ ಭೇಟಿ ನೀಡಿ ಅವರ ಸಹಭಾಗಿತ್ವವನ್ನು ಪಡೆದು ಭವನವನ್ನು ನಿರ್ಮಾಣಮಾಡಿದ ಸೂಡರು ಮಾದರಿಯಾಗಿದ್ದಾರೆ ಎಂದು ಅತಿಥಿಗೃಹ ಉದ್ಘಾಟಿಸಿದ ಕೆ.ಜಯಪ್ರಕಾಶ್‌ ಹೆಗ್ಡೆ ಹೇಳಿದರು. ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಅತೀ ಕಡಿಮೆ ಅವಧಿಯಲ್ಲಿ ಬೃಹತ್‌ ಸಮುದಾಯ ಭವನ ಪೆರ್ಡೂರು ಬಂಟರ ಸಂಘ ನಿರ್ಮಿಸಿದೆ ಎಂದರು.

ಶ್ರೀಮತಿ ಪ್ರಪುಲ್ಲ ಬೇಳಂಜೆ ಸಂಜೀವ ಹೆಗ್ಡೆ ಡೈನಿಂಗ್‌ ಹಾಲ್‌ ಅನ್ನು ಬಂಟರ ಮಾತೃಸಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಪಳ್ಳಿ ಪೆಜಕೊಡಂಗೆ ಲೀಲಾವತಿ ಎಸ್‌. ಹೆಗ್ಡೆ ಉದ್ಘಾಟಿಸಿದರು. ಶ್ರೀಮತಿ ಅಶಾ ಪ್ರಕಾಶ್‌ ಶೆಟ್ಟಿ ಸಹಕಾರಿ ಭವನವನ್ನು ಉದ್ಯಮಿ ಸುಧಾಕರ ಶೆಟ್ಟಿ ಉದ್ಘಾಟಿಸಿದರು. ಶ್ರೀಮತಿ ಲೀಲಾವತಿ ಕುಕ್ಕೂಂಜಾರು ಸುಧಾಕರ ಶೆಟ್ಟಿ ಸಭಾವೇದಿಕೆಯನ್ನು ಶೇಡಿಕೊಡ್ಲು ವಿಠuಲ ಶೆಟ್ಟಿ ಉದ್ಘಾಟಿಸಿದರು. ಅದಾನಿ ಗ್ರೂಪ್‌ನ ಅಧ್ಯಕ್ಷ ಕಿಶೋರ್‌ ಆಳ್ವ ಅವರು ಪೆರ್ಡೂರಿನ ಬಂಟರು ಸ್ಮರಣಸಂಚಿಕೆ ಬಿಡುಗಡೆಗೊಳಿಸಿದರು.

Advertisement

ಮುಂಬಯಿ ವಿಲೇಪಾರ್ಲೆಯ ರಾಮಕೃಷ್ಣ ಗ್ರೂಪ್‌ ಆಫ್‌ ಹೊಟೇಲ್‌ನ ಚಂದ್ರಶೇಖರ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಉದ್ಯಮಿ ಡಾ| ಕೈಲ್ಕೆರೆ ಭಾಸ್ಕರ ಶೆಟ್ಟಿ, ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಗಣ್ಯರಾದ ಉಪೇಂದ್ರ ಶೆಟ್ಟಿ, ಶಿವಪ್ರಸಾದ್‌ ಹೆಗ್ಡೆ, ದಿನೇಶ್‌ ಹೆಗ್ಡೆ, ಕೆ. ರಾಜರಾಮ ಹೆಗ್ಡೆ, ಉದಯಕೃಷ್ಣ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಸಂಚಾಲಕಿ ನಮಿತಾ ಉದಯಕುಮಾರ್‌ ಶೆಟ್ಟಿ, ಡಾ| ರಮಾನಂದ ಸೂಡ, ಪ್ರಮೋದ್‌ ರೈ ಪಳಜೆ, ಮಹೇಶ್‌ ಶೆಟ್ಟಿ ಪೈಬೆಟ್ಟು, ಸುಧಾಕರ ಶೆಟ್ಟಿ, ಸುರೇಶ್‌ ಹೆಗ್ಡೆ, ಪ್ರಕಾಶ್‌ ಶೆಟ್ಟಿ, ದಿನೇಶ್ಚಂದ್ರ ಶೆಟ್ಟಿ, ರಾಜ್‌ಕುಮಾರ್‌ ಶೆಟ್ಟಿ, ಶಿವರಾಮ ಶೆಟ್ಟಿ, ಸರಳ ಎಸ್‌. ಹೆಗ್ಡೆ, ಹರೀಶ್‌ ಶೆಟ್ಟಿ ವಾಂಟ್ಯಾಳ ಮೊದಲಾದವರು ಉಪಸ್ಥಿತರಿದ್ದರು.

ಕಟ್ಟಡದ ವಿನ್ಯಾಸಕಾರರಾದ ಸುಷ್ಮಾ ಎನ್‌ ಹೆಗ್ಡೆ, ಹರೀಶ್‌ ಶೆಟ್ಟಿ, ರಾಘವೇಂದ್ರ ಶೆಟ್ಟಿ ಅವರನ್ನು ಹಾಗೂ ಕಟ್ಟಡ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.

ಸತೀಶ್‌ ಶೆಟ್ಟಿ ಕುತ್ಯಾರುಬೀಡು ಸ್ವಾಗತಿಸಿ, ವಿಜಯಕುಮಾರ್‌ ಶೆಟ್ಟಿ ಸಿದ್ದಾಪುರ ನಿರೂಪಿಸಿ, ಶ್ರೀಧರ ಕೆ. ಶೆಟ್ಟಿ ಕುತ್ಯಾರು ಬೀಡು ವಂದಿಸಿದರು.

ಅಧ್ಯಕ್ಷ ಕೆ.ಶಾಂತರಾಮ ಸೂಡ ಮಾತನಾಡಿ ಮಂಡಲದ ಸುಮಾರು 650ಕ್ಕೂ ಮಿಕ್ಕಿ ಬಂಟ ಸಮಾಜ ಬಾಂಧವರು ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿರುವುದರಿಂದ ಬಂಟ ಸಮಾಜದ ಕಟ್ಟಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗಿದೆ ಎಂದರು.

ಸ್ಥಳದಾನವನ್ನು ನೀಡಿದ ಪಳ್ಳಿ ಶ್ರೀನಿವಾಸ ಹೆಗ್ಡೆ ಕುಟುಂಬಿಕರ ಪರವಾಗಿ ಉದ್ಯಮಿ ನಟರಾಜ್‌ ಹೆಗ್ಡೆ ಮಾತನಾಡಿ ಯಾವುದೇ ವ್ಯಕ್ತಿಗಿಂತ ಸಂಘ ಮುಂದೆ ಎಂದು ಸಂಘವನ್ನು ಮುನ್ನಡೆಸುತ್ತಿರುವ ಸರಳ ವ್ಯಕ್ತಿತ್ವ ಶಾಂತಾರಾಮ ಸೂಡರು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next