Advertisement

ಬೆಂಗಳೂರು ಟೆಕ್ ಸಮಿಟ್-2020 ಗೆ ಸಿಎಂ ಯಡಿಯೂರಪ್ಪ ಚಾಲನೆ

11:04 AM Nov 19, 2020 | keerthan |

ಬೆಂಗಳೂರು: ಏಷ್ಯಾದ ಅತೀ ದೊಡ್ಡ ತಂತ್ರಜ್ಞಾನ ಮೇಳ ‘ಬೆಂಗಳೂರು ಟೆಕ್ ಸಮಿಟ್-2020’ ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಮುಖರಿಂದ ಚಾಲನೆ ನೀಡಲಾಯಿತು.

Advertisement

ನ. 19ರಿಂದ 21ರ ವರೆಗೆ ನಡೆಯುವ ಶೃಂಗದಲ್ಲಿ 20 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದ್ದು , 250 ಪ್ರದರ್ಶಕರು ಭಾಗವಹಿಸಲಿದ್ದಾರೆ. ಆರೋಗ್ಯ, ಕೃಷಿ, ವಿಪತ್ತು ನಿರ್ವಹಣೆಗೆ ಡ್ರೋಣ್‌ ಮತ್ತು ರೋಬೊಟಿಕ್‌ಗಳ ಮೂಲಕ ಪರಿಹಾರ, ಡಿಜಿಟಲ್‌ ಹೆಲ್ತ್‌ ಕೇರ್‌, ಸಾರ್ವಜನಿಕ ಸಾರಿಗೆಯಲ್ಲಿ ತಂತ್ರಜ್ಞಾನ, ಕೃಷಿ ಉದ್ಯಮ, ಸೈಬರ್‌ ಸೆಕ್ಯುರಿಟಿ, ಉಪಗ್ರಹ ಮತ್ತು ಸಮಾಜ ಸೇರಿದಂತೆ70ಕ್ಕೂ ಅಧಿಕ ಗೋಷ್ಠಿಗಳು ನಡೆಯಲಿವೆ.

ಇದನ್ನೂ ಓದಿ:ದೇಶ-ವಿದೇಶಗಳ ವೆಬ್‌ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಬಂಧನ

“ನೆಕ್ಸ್ಟ್ ಈಸ್‌ ನೌ’ ಶೀರ್ಷಿಕೆ ಅಡಿ ಭವಿಷ್ಯವನ್ನು ಈಗಲೇ ಕಂಡುಕೊಳ್ಳುವ ಪ್ರಯತ್ನ ಈ ಮೇಳದಲ್ಲಿ ನಡೆಯಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಛಾಪು ಮೂಡಿಸಿದ 25ಕ್ಕೂ ಹೆಚ್ಚು ದೇಶಗಳಪ್ರತಿನಿಧಿಗಳು,ವಿವಿಧ ದೇಶಗಳ ರಾಯಭಾರಿಗಳು ಭೌತಿಕವಾಗಿ ಹಾಗೂ ಕೆಲವರು ವರ್ಚುವಲ್‌ ಆಗಿ ಪಾಲ್ಗೊಳ್ಳಲಿದ್ದಾರೆ.

Advertisement

ಕಳೆದ ಬಾರಿ 18-20 ದೇಶಗಳಿಗೆ ಸೀಮಿತವಾಗಿತ್ತು. ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್‌, ವಿದ್ಯುತ್‌ಚಾಲಿತ ವಾಹನಗಳು, ಕೃಷಿ, ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ತಜ್ಞರು ಚರ್ಚೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next