Advertisement

ಜಿಎಸ್‌ಟಿ ಆತಂಕ ಕೊಡವಿಕೊಂಡ ಮುಂಬಯಿ ಶೇರು 64 ಅಂಕ ಏರಿಕೆ

03:59 PM Jun 30, 2017 | |

ಮುಂಬಯಿ : ಜಿಎಸ್‌ಟಿ ಬಗೆಗಿನ ಭಯ, ಆತಂಕ, ಗೊಂದಲಗಳನ್ನು ಕೊಡವಿಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಶುಕ್ರವಾರದ ವಹಿವಾಟನ್ನು 64.09 ಅಂಕಗಳ ಏರಿಕೆಯೊಂದಿಗೆ 30,921.61 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 16.80 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,520.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಐಟಿಸಿ, ಸನ್‌ ಫಾರ್ಮಾ, ಸಿಪ್ಲಾ ಟಾಪ್‌ ಗೇನರ್‌ ಸಾಲಿನಲ್ಲಿ ಕಾಣಿಸಿಕೊಂಡರೆ ಟಾಟಾ ಮೋಟರ್‌ ಡಿವಿಆರ್‌, ಐಸಿಐಸಿಐ ಬ್ಯಾ,ಕ್‌, ಎಚ್‌ ಡಿ ಎಫ್ ಸಿ ಟಾಪ್‌ ಲೂಸರ್‌ಗಳಾಗಿ ಕಾಣಿಸಿಕೊಂಡವು. 

ಜಿಎಸ್‌ಟಿ ಅನುಷ್ಠಾನದಲ್ಲಿ ಹಲವಾರು ಗೊಂದಲಗಳು ಇರುವ ಹೊರತಾಗಿಯೂ ಅದರಿಂದ ದೇಶದ ಆರ್ಥಿಕ ಸುಧಾರಣಾ ಪ್ರಕ್ರಿಯೆಗೆ ಹೊಸ ಶಕ್ತಿ ದೊರಕಲಿದೆ ಎಂಬ ವಿಶ್ವಾಸ ಶೇರು ಮಾರುಕಟ್ಟೆಯಲ್ಲಿ ಕಂಡು ಬಂದಿರುವುದು ಧನಾತ್ಮಕವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next