Advertisement

ನೆಲಕಚ್ಚಿದ್ದ ಶೇರುಗಳ ಭರಾಟೆ ಖರೀದಿ: Sensex 352 ಅಂಕ ಜಂಪ್‌

04:22 PM Dec 07, 2017 | udayavani editorial |

ಮುಂಬಯಿ : ಕಳೆದ ಕೆಲವು ದಿನಗಳ ಏರಿಳಿತಗಳಲ್ಲಿ ತೀವ್ರವಾಗಿ ನೆಲಕಚ್ಚಿದ್ದ ಬ್ಯಾಂಕ್‌, ಆಟೋ ಮತ್ತು ಮೆಟಲ್‌ ಶೇರುಗಳನ್ನು ಇಂದು ವಹಿವಾಟುದಾರರು ಮತ್ತು ಹೂಡಿಕೆದಾರರು ಮುಗಿಬಿದ್ದು ಖರೀದಿಸಲು ಮುಂದಾದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 352 ಅಂಕಗಳ ಭರ್ಜರಿ ಏರಿಕೆಯೊಂದಿಗೆ 32,949.21 ಅಂಕಗಳ ಮಟ್ಟಕೇರಿ ಹೊಸ ವಿಶ್ವಾಸ ಮತ್ತು ಭರವಸೆಯೊಂದಿಗೆ ಇಂದು ಗುರುವಾರದ ವಹಿವಾಟನ್ನು ಕೊನೆಗೊಳಿಸಿತು. 

Advertisement

ನಿನ್ನೆ ಬುಧವಾರದ ವಹಿವಾಟನ್ನು ಸೆನ್ಸೆಕ್ಸ್‌ 205 ಅಂಕಗಳ ನಷ್ಟದೊಂದಿಗೆ ನಿರಾಶಾದಾಯಕವಾಗಿ ಕೊನೆಗೊಳಿಸಿತ್ತು. ಇಂದಿನ 352 ಅಂಕಗಳ ಜಿಗಿತವು ಸೆನ್ಸೆಕ್ಸ್‌ ಕಳೆದ ನ.30ರ ಬಳಿಕ ದಾಖಲಿಸಿರುವ ಅತೀ ದೊಡ್ಡ ಜಂಪ್‌ ಆಗಿದೆ.

ಇದೇ ರೀತಿ ಇಂದಿನ ವಹಿವಾಟಿನಲ್ಲಿ 10,100 ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್‌ ಸಂಪಾದಿಸಿದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನದ ವಹಿವಾಟನ್ನು 122.60 ಅಂಕಗಳ ಜಿಗಿತದೊಂದಿಗೆ 10,166.70 ಅಂಕಗಳ ಮಟ್ಟಕ್ಕೆ ನೆಗೆಯುವ ಮೂಲಕ ಆಶಾದಾಯಕವಾಗಿ ಕೊನೆಗೊಳಿಸಿತು.

ಈ ವರ್ಷ ಮೇ 25ರಂದು ನಿಫ್ಟಿ 149.20 ಅಂಕಗಳ ಅತೀ ದೊಡ್ಡ ಜಂಪ್‌ ದಾಖಲಿಸಿದ ಬಳಿಕ ಇಂದು ಸಾಧಿಸಿರುವ 122.60 ಅಂಕಗಳ ಜಿಗಿತ ಅತೀ ದೊಡ್ಡ ಏರಿಕೆ ಎಂದು ಪರಿಗಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next