ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಜಬರ್‌ದಸ್ತ್ ಪ್ರವೃತ್ತಿ ತೋರಿಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 190 ಅಂಕಗಳ ಜಿಗಿತವನ್ನು ಸಾಧಿಸಿ 33,000 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು.ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 10,200 ಅಂಕಗಳ ಮಟ್ಟವನ್ನು ಮತ್ತೆ ವಶಪಡಿಸಿಕೊಂಡಿತು.
ಜಾಗತಿಕ ಮಟ್ಟದಲ್ಲಿನ ಪ್ರಬಲ ಪ್ರವೃತ್ತಿಯಿಂದ ಪ್ರೇರಿತರಾದ ಹೂಡಿಕೆದಾರರು ಮತ್ತು ವಹಿವಾಟುದಾರರು ಇಂದಿನ ಆರಂಭಿಕ ವಹಿವಾಟಿನಲ್ಲಿ ಗ್ರಾಹಕ ವಸ್ತುಗಳು, ಬ್ಯಾಂಡ್, ಮೆಟಲ್ ಹಾಗೂ ಆಟೋ ಕ್ಷೇತ್ರಗಳ ಶೇರುಗಳ ಭರಾಟೆಯಲ್ಲಿ ತೊಡಗಿಕೊಂಡರು.
ನಿನ್ನೆ ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 352 ಅಂಕಗಳ ಭರ್ಜರಿ ಮುನ್ನಡೆಯನ್ನು ಸಾಧಿಸಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 219.20 ಅಂಕಗಳ ಏರಿಕೆಯೊಂದಿಗೆ 33,168.41 ಅಂಕಗಳ ಮಟ್ಟದಲ್ಲೂ , ನಿಫ್ಟಿ 72.50 ಅಂಕಗಳ ಮುನ್ನಡೆಯೊಂದಿಗೆ 10,239.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಮಾರುತಿ ಸುಜುಕಿ, ಭಾರ್ತಿ ಏರ್‌ಟೆಲ್, ಟಾಟಾ ಮೋಟರ್, ರಿಲಯನ್ಸ್, ಗೇಲ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.