ಮುಂಬಯಿ : ನಿರಂತರ ಐದನೇ ದಿನವೂ ತನ್ನ ಏರುಗತಿಯನ್ನು ಮುಂದುವರಿಸಿರುವ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 250 ಅಂಕಗಳ ಜಿಗಿತವನ್ನು ದಾಖಲಿಸಿದೆ.
ಏಶ್ಯನ್ ಶೇರು ಪೇಟೆಯಲ್ಲಿ ಧನಾತ್ಮಕ ಸನ್ನಿವೇಶ ನೆಲೆಗೊಂಡಿರುವುದನ್ನು ಅನುಸರಿಸಿ ಹೂಡಿಕೆದಾರರು ಮತ್ತು ವಹಿವಾಟುದಾರರು ಆಯ್ದ ಬ್ಲೂಚಿಪ್ ಶೇರುಗಳ ಖರೀದಿಯಲ್ಲಿ ತೀವ್ರ ಆಸಕ್ತಿ ತೋರಿರುವುದೇ ಮುಂಬಯಿ ಶೇರು ಪೇಟೆಯ ಇಂದಿನ ಜಿಗತಕೆ ಕಾರಣವಾಗಿದೆ.
ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್ 287.20 ಅಂಕಗಳ ಏರಿಕೆಯೊಂದಿಗೆ 36,673.81 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 70.70 ಅಂಕಗಳ ಏರಿಕೆಯೊಂದಿಗೆ 10,977.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 26 ಪೈಸೆಯ ಕುಸಿತವನ್ನು ಕಂಡು 71.45 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ರಿಲಯನ್ಸ್, ಸನ್ ಫಾರ್ಮಾ, ಲಾರ್ಸನ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಇನ್‌ಫೋಸಿಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.