ಮುಂಬಯಿ : ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 31,135.01 ಅಂಕಗಳ ಹೊಸ ಎತ್ತರವನ್ನು ತಲುಪುವ ಸಾಧನೆ ಮಾಡಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಎತ್ತರದ ಮಟ್ಟವಾಗಿ 9.939.30 ಅಂಕಗಳ ಮಟ್ಟವನ್ನು ಇಂದಿನ ಆರಂಭಿಕ ವಹಿವಾಟಿನಲ್ಲಿ ತಲುಪಿದೆ.
ಬೆಳಗ್ಗೆ 10.15ರ ಹೊತ್ತಿಗೆ ಸೆನ್ಸೆಕ್ಸ್ 136.35 ಅಂಕಗಳ ಮುನ್ನಡೆಯನ್ನು ಕಾಯ್ದುಕೊಡು 32,165.65 ಅಂಕಗಳ ಮಟ್ಟದಲ್ಲೂ , ನಿಫ್ಟಿ 33.35 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 9,948.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಐಟಿಸಿ, ಎಸ್ ಬ್ಯಾಂಕ್, ಎಸ್‌ಬಿಐ ಎಚ್ ಡಿ ಎಫ್ ಸಿ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಎಸ್ ಬ್ಯಾಂಕ್, ರಿಲಯನ್ಸ್, ಬ್ಯಾಂಕ್ ಆಫ್ ಬರೋಡ, ವಿಪ್ರೋ, ಐಟಿಸಿ ಕಾಣಿಸಿಕೊಂಡಿದ್ದರೆ ಟಾಪ್ ಲೂಸರ್‌ಗಳಾಗಿ ಡಾ. ರೆಡ್ಡಿ, ಐಡಿಯಾ ಸೆಲ್ಯುಲರ್, ಏಶ್ಯನ್ ಪೇಂಟ್ಸ್, ಒಎನ್‌ಜಿಸಿ, ವೇದಾಂತ ಶೇರುಗಳು ಕಾಣಿಸಿಕೊಂಡಿದ್ದವು.