Advertisement

ರೂಪಾಯಿ ಬಲವರ್ಧನೆ; ಮುಂಬಯಿ ಶೇರು 112 ಅಂಕ ಏರಿಕೆ

11:05 AM Nov 22, 2017 | udayavani editorial |

ಮುಂಬಯಿ : ಡಾಲರ್‌ ಎದುರು ರೂಪಾಯಿ ವಿನಿಮಯ ದರ 14 ಪೈಸೆ ಸುಧಾರಿಸಿರುವುದನ್ನು ಅನುಸರಿಸಿ ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂಚೂಣಿ ಶೇರುಗಳ ಭರಾಟೆಯ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆ ಇಂದು ಬುಧವಾರದ ವಹಿವಾಟನ್ನು 112 ಅಂಕಗಳ ಉತ್ತಮ ಏರಿಕೆಯೊಂದಿಗೆ ಆರಂಭಿಸಿತು.

Advertisement

ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಉತ್ತಮ ತೇಜಿ ಕಂಡುಬಂದಿರುವುದು ಮತ್ತು ನಿನ್ನೆಯ ವಹಿವಾಟನ್ನು ಅಮೆರಕದ ವಾಲ್‌ ಸ್ಟ್ರೀಟ್‌ ಮೇಲ್ಮಟ್ಟದಲ್ಲಿ ಕೊನೆಗೊಳಿಸಿರುವುದು ಇಂದು ಮುಂಬಯಿ ಶೇರು ಪೇಟೆಗೆ ಹೊಸ ಉತ್ಸಾಹವನ್ನು ತುಂಬಿತು.

ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಒಟ್ಟಾರೆಯಾಗಿ  717.91 ಅಂಕ ಸಂಪಾದಿಸಿದ್ದು  ಮುಂಬಯಿ ಶೇರು ಪೇಟೆಯಲ್ಲೀಗ ಗೂಳಿಗಳ ಸಂಭ್ರಮವೇ ಎದ್ದು ಕಾಣುವಂತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್‌ 50.66 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,529.01 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.10 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,330.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next