ಮುಂಬಯಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಮದು ಸುಂಕ ಹೇರುವ ಪ್ರಸ್ತಾವದಿಂದಾಗಿ ಜಾಗತಿಕ ವಾಣಿಜ್ಯ ಸಮರ ಸ್ಫೋಟಗೊಳ್ಳುವ ಭೀತಿ ಉಂಟಾಗಿರುವ ಕಾರಣಕ್ಕೆ ಮುಂಬಯಿ ಶೇರು ಮಾರುಕಟ್ಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 252 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲೂ ಇದೇ ಕಾರಣಕ್ಕೆ ಅಸ್ಥಿರತೆಯ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 90 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 11.10ಕ್ಕೆ ಸೆನ್ಸೆಕ್ಸ್ 294.72 ಅಂಕಗಳ ನಷ್ಟದೊಂದಿಗೆ 33,752.22 ಅಂಕಗಳ ಮಟ್ಟದಲ್ಲೂ ನಿಫ್ಟಿ 104 ಅಂಕಗಳ ನಷ್ಟದೊಂದಿಗೆ 10,354.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಅರಬಿಂದೋ ಫಾರ್ಮಾ, ಟಾಟಾ ಸ್ಟೀಲ್, ಇನ್‌ಫೋಸಿಸ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ ಗೇನರ್‌ಗಳಾಗಿ ಟಿಸಿಎಸ್, ಟೆಕ್ ಮಹೀಂದ್ರ, ಇನ್‌ಫೋಸಿಸ್, ಸಿಪ್ಲಾ ಕಂಡುಬಂದವು; ಟಾಪ್ ಲೂಸರ್‌ಗಳಾಗಿ ಹಿಂಡಾಲ್ಕೊ, ಅರಬಿಂದೋ ಫಾರ್ಮಾ, ಎಸ್ ಬ್ಯಾಂಕ್, ಗೇಲ್ ಶೇರುಗಳು ಹಿನ್ನಡೆಗೆ ಗುರಿಯಾದವು.