ಮುಂಬಯಿ : ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಕೆಳಮುಖವಾಗಿ ಸಾಗಿರುವ ಮುಂಬಯಿ ಶೇರು ಪೇಟೆ ಇಂದು ಐದನೇ ದಿನವಾದ ಮಂಗಳವಾರದ ವಹಿವಾಟನ್ನು ಕೂಡ ನಷ್ಟದಲ್ಲೇ ಕೊನೆಗೊಳಿಸಿದೆ.
ಕಳೆದ ಒಂಬತ್ತು ದಿನಗಳ ವಹಿವಾಟಿನಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 10,000ಕ್ಕಿಂತ ಕೆಳಮಟ್ಟಕ್ಕೆ ಜಾರಿ ನಿರಾಶೆ ಉಂಟುಮಾಡಿದೆ.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 259.48 ಅಂಕಗಳ ನಷ್ಟದೊಂದಿಗೆ 32,014.19 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನದ ವಹಿವಟನ್ನು 78.85 ಅಂಕಗಳ ನಷ್ಟದೊಂದಿಗೆ 9,978.55 ಅಂಕಗಳ ಮಟ್ಟಕ್ಕೆ ಜಾರುವ ಮೂಲಕ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಮಾರುಕಟ್ಟೆಯಲ್ಲಿನ ವಹಿವಾಟು ಹರಹು ಇಂದು ದುರ್ಬಲವಾಗಿತ್ತು. ಕೇವಲ 602 ಶೇರುಗಳು ಮುನ್ನಡೆ ಸಾಧಿಸಿದರೆ 1,974 ಶೇರುಗಳು ಹಿನ್ನಡೆಗೆ ಗುರಿಯಾದವು; 121 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.
ಟಾಟಾ ಸ್ಟೀಲ್, ಸಿಪ್ಲಾ, ವೇದಾಂತ ಮತ್ತು ಹಿಂಡಾಲ್ಕೊ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು; ಡಾ.ರೆಡ್ಡಿ, ಬಿಎಚ್‌ಇಎಲ್, ಬಿಪಿಸಿಎಲ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.