Advertisement

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

06:58 PM Dec 24, 2024 | Team Udayavani |

ಬರೇಲಿ: ಸಂಸತ್ತಿನಲ್ಲಿ ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಅವರಿಗೆ ಉತ್ತರಪ್ರದೇಶದ ಬರೇಲಿಯ ಕೋರ್ಟೊಂದು ಸಮನ್ಸ್‌ ಜಾರಿ ಮಾಡಿದೆ.

Advertisement

ಜ.7ರಂದು ವಿಚಾರಣೆಗೆ ಬರುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಜೂ.25ರಂದು ಲೋಕಸಭೆಯಲ್ಲಿ ಪ್ರಮಾಣ ಸ್ವೀಕರಿಸುವ ವೇಳೆ ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗಿ ಸಂವಿಧಾನ ಮತ್ತು ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಜು.12ರಂದು ಜನಪ್ರತಿನಿಧಿಗಳ ನ್ಯಾಯಲಯದಲ್ಲಿ ವೀರೇಂದ್ರ ಗುಪ್ತ ಎಂಬ ವಕೀಲರು ದಾವೆ ಹೂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next