ಮುಂಬಯಿ : ಇಂದು ಬುಧವಾರ 2073 ಸಂವತ್ಸರದ ಕೊನೆಯ ವಹಿವಾಟು ದಿನವಾಗಿರುವ ಕಾರಣ ಹಾಗೂ ಕೆಲವೊಂದು ಬ್ಲೂ ಚಿಪ್ ಕಂಪೆನಿಗಳ ಸೆಪ್ಟಂಬರ್ ಅಂತ್ಯದ ತ್ತೈಮಾಸಿಕ ಫಲಿತಾಂಶಗಳು ಹೆಚ್ಚು ಆಶಾದಾಯಕವಾಗಿಲ್ಲದಿರುವ ಕಾರಣ, ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 24.81 ಅಂಕಗಳ ನಷ್ಟದೊಂದಿಗೆ 32,584.35 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.6 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,210.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ 2,975 ಶೇರುಗಳು ವಹಿವಾಟಿಗೆ ಒಳಪಟಟವು; 1,361 ಶೇರುಗಳು ಮುನ್ನಡೆ ಸಾಧಿಸಿದವು. 1,463 ಶೇರುಗಳು ಹಿನ್ನಡೆಗೆ ಗುರಿಯಾದವು. 151 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ರಿಲಯನ್ಸ್, ಪವರ್ ಗ್ರಿಡ್, ಒಎನ್‌ಜಿಸಿ, ವಿಪ್ರೋ, ಕೋಟಕ್ ಮಹೀಂದ್ರ.
ಟಾಪ್ ಲೂಸರ್‌ಗಳು ; ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಭಾರ್ತಿ ಇನ್‌ಫ್ರಾಟೆಲ್, ಸಿಪ್ಲಾ, ಟೆಕ್ ಮಹೀಂದ್ರ.