Advertisement
ರಷ್ಯಾ ಮೂಲದ ಕಜಕಸ್ಥಾನದ ಆಟಗಾರ್ತಿ ಯಾಗಿರುವ ಎಲೆನಾ ರಿಬಾಕಿನಾ ಮೊದಲ 8 ಗೇಮ್‌ಗಳನ್ನು ತಮ್ಮದಾಗಿಸಿಕೊಂಡು ಸಬಲೆಂಕಾ ವಿರುದ್ಧ ಪ್ರಭುತ್ವ ಸಾಧಿಸಿದರು. 73 ನಿಮಿಷಗಳಲ್ಲಿ ಪಂದ್ಯವನ್ನು ವಶಪಡಿಸಿಕೊಂಡರು. ಇದು ವಿಶ್ವದ 6ನೇ ರ್‍ಯಾಂಕಿಂಗ್ ಆಟಗಾರ್ತಿಗೆ ಒಲಿದ 6ನೇ ಡಬ್ಲ್ಯುಟಿಎ ಪ್ರಶಸ್ತಿ. ಇದರೊಂದಿಗೆ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಗೆ ಹೊಸ ಹುರುಪಿನಿಂದ ಸಜ್ಜುಗೊಂಡರು.
ಆಕ್ಲೆಂಡ್: ಅಮೆರಿಕದ 19 ವರ್ಷದ ಆಟಗಾರ್ತಿ ಕೊಕೊ ಗಾಫ್ “ಆಕ್ಲೆಂಡ್ ಕ್ಲಾಸಿಕ್’ ಟೆನಿಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ 6-7 (4-7), 6-3, 6-3 ಅಂತರದ ಗೆಲುವು ಸಾಧಿಸಿದರು.
“ನಾನು ಉಳಿಸಿಕೊಂಡ ಮೊದಲ ಟೆನಿಸ್ ಪ್ರಶಸ್ತಿ ಇದಾಗಿದೆ. ಸಹಜ ವಾಗಿಯೇ ಹೆಚ್ಚು ಖುಷಿಯಾಗಿದೆ’ ಎಂದು 7ನೇ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದ ಕೊಕೊ ಗಾಫ್ ಹೇಳಿದರು. 6 ವರ್ಷಗಳ ಬಳಿಕ ಡಿಮಿಟ್ರೋವ್‌ಗೆ ಪ್ರಶಸ್ತಿ
ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಪಾಲಾಗಿದೆ. ಫೈನಲ್‌ನಲ್ಲಿ ಅವರು ಡೆನ್ಮಾರ್ಕ್‌ನ ಹೋಲ್ಗರ್ ರುನೆ ವಿರುದ್ಧ 7-6 (5), 6-4 ಅಂತರದ ಗೆಲುವು ಸಾಧಿಸಿ ಎಟಿಪಿ ಪ್ರಶಸ್ತಿ ಬರಗಾಲವನ್ನು ನೀಗಿಸಿಕೊಂಡರು. ಇದರೊಂದಿಗೆ ಸುದೀರ್ಘ 6 ವರ್ಷಗಳ ತರುವಾಯ ಡಿಮಿಟ್ರೋವ್ ಎಟಿಪಿ ಪ್ರಶಸ್ತಿಯೊಂದನ್ನು ತಮ್ಮದಾಗಿಸಿ ಕೊಂಡಂತಾಯಿತು.
Related Articles
Advertisement