Advertisement
ಬುಧವಾರ ನಡೆದ ಪಂದ್ಯದಲ್ಲಿ ಮೆಡ್ವೆಡೇವ್ 7-5, 6-2 ಸೆಟ್‌ಗಳಿಂದ ಮರ್ರೆ ವಿರುದ್ಧ ಜಯಿಸಿದ್ದಾರೆ. ಕಳೆದ ವರ್ಷ ಸೊಂಟನೋವಿನಿಂದಾಗಿ ಟೆನಿಸ್‌ನಿಂದ ಬಹಳಷ್ಟು ಸಮಯ ದೂರ ಉಳಿದಿದ್ಧ ಮರ್ರೆ ಈ ಕೂಟದ ಮೂಲಕ ಟೆನಿಸಿಗೆ ಮರಳಿದ್ದರು. ಮೆಡ್ವೆಡೇವ್ ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಮಿಲೋಸ್ ರಾನಿಕ್ ಅವರನ್ನು ಎದುರಿಸಲಿದ್ದಾರೆ.
ಅಗ್ರ ಶ್ರೇಯಾಂಕಿತ ಸ್ಪೇನ್‌ನ ರಫೆಲ್ ನಡಾಲ್ ತೊಡೆಯ ನೋವಿನಿಂದಾಗಿ ಬ್ರಿಸ್ಬೇನ್ ಕೂಟದಿಂದ ಹಿಂದೆ ಸರಿದಿದ್ದಾರೆ. ಇವರ ಸ್ಥಾನಕ್ಕೆ ಜಪಾನ್‌ನ ಟಾರೊ ಡೇನಿಯಲ್ ಅವರನ್ನು ಸೇರಿಸಿಕೊಳ್ಳಲಾಗಿದೆ.