Advertisement

Badal Case; ಪಂಜಾಬ್ ಮತ್ತು ಪಂಜಾಬಿಯತ್ ವಿರುದ್ಧ ದೊಡ್ಡ ಸಂಚು: ಕೇಜ್ರಿವಾಲ್

05:24 PM Dec 05, 2024 | Team Udayavani |

ಹೊಸದಿಲ್ಲಿ: ”ಯಾವುದೇ ದೊಡ್ಡ ಅನಾಹುತವನ್ನು ಎಷ್ಟು ಉತ್ತಮ ಪೋಲೀಸಿಂಗ್ ತಡೆಯಬಹುದು ಎಂಬುದಕ್ಕೆ ಸುಖ್ಬೀರ್ ಬಾದಲ್ ಅವರ ಮೇಲಿನ ದಾಳಿ ತಡೆದದ್ದು ಇಡೀ ದೇಶಕ್ಕೆ ಉದಾಹರಣೆಯಾಗಿದೆ. ಈ ದುರ್ಘಟನೆಯು ಪಂಜಾಬ್ ಮತ್ತು ಪಂಜಾಬಿಯತ್ ವಿರುದ್ಧ ಮಾನಹಾನಿ ಮಾಡಲು ದೊಡ್ಡ ಸಂಚು ರೂಪಿಸಲಾಗುತ್ತಿದೆ ಎಂದು ತೋರಿಸುತ್ತದೆ. ಈ ಪಿತೂರಿಯನ್ನು ನಾವು ಯಾವುದೇ ಬೆಲೆಯಲ್ಲಿ ಯಶಸ್ವಿಯಾಗಲು ಬಿಡಬಾರದು. ಪಂಜಾಬ್ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ” ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

Advertisement

ಗೋಲ್ಡನ್ ಟೆಂಪಲ್‌ನಲ್ಲಿ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ಗುಂಡು ಹಾರಿಸಲು ಯತ್ನಿಸಿದ ಕುರಿತಾಗಿ ಶಿರೋಮಣಿ ಅಕಾಲಿದಳದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ “ಮೊದಲು, ಪಂಜಾಬ್ ಪೊಲೀಸರನ್ನು ನಾನು ಅಭಿನಂದಿಸುತ್ತೇನೆ, ಅವರು ಜಾಗರೂಕತೆಯಿಂದ ಇಂತಹ ದೊಡ್ಡ ಅಪಘಾತವನ್ನು ವಿಫಲಗೊಳಿಸಿದ್ದಾರೆ” ಎಂದರು.

”ಬಿಜೆಪಿ ಮತ್ತು ಮಾಧ್ಯಮಗಳಲ್ಲಿ ಕೆಲವು ಜನರು ಪಂಜಾಬ್‌ನ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಪಂಜಾಬ್ ಪೊಲೀಸರು ತಮ್ಮ ಜಾಗರೂಕತೆಯಿಂದ ದೊಡ್ಡ ಅನಾಹುತವನ್ನು ವಿಫಲಗೊಳಿಸಿದ್ದಾರೆ ಎಂದು ಅವರಿಗೆ ತೋರಿಸಿದ್ದಾರೆ. ದೆಹಲಿಯಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡಲು ನಾನು ಅವರನ್ನು ಒತ್ತಾಯಿಸಲು ಬಯಸುತ್ತೇನೆ” ಎಂದು ಕೇಜ್ರಿವಾಲ್ ಅವರು ಪಂಜಾಬ್ ನ ಆಮ್ ಆದ್ಮಿ ಸರಕಾರದ ವಿರುದ್ಧ ಟೀಕೆ ಮಾಡಿದವರಿಗೆ ತಿರುಗೇಟು ನೀಡಿ ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next