ಕಟಪಾಡಿ: ನೆರೆಯಿಂದ ಹಾನಿಗೀಡಾದ ಮಟ್ಟುಗುಳ್ಳ ಬೆಳೆಗೆ ಸಂಬಂಧಿಸಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು. ಅವರು ಸೆ.29ರಂದು ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟುವಿನಲ್ಲಿ ಬೆಳೆ ಹಾನಿ ಪರಿಶೀಲಿಸಿ, ರೈತರ ಮನವಿ ಸ್ವೀಕರಿಸಿ ಭರವಸೆ ನೀಡಿದರು.
ನವರಾತ್ರಿಗೆ ಮಟ್ಟುಗುಳ್ಳ ಮಾರುಕಟ್ಟೆ
ಪ್ರವೇಶಿಸಬೇಕಿದ್ದು, ಕೆಲವೇ ದಿನಗಳಿರುವಾಗ ಅಪಾರ ಬೆಳೆ ಹಾನಿಯಾಗಿದೆ. ಈ ಬಗ್ಗೆ ವರದಿ ಆಧರಿಸಿ ಹೆಚ್ಚಿನ ಮೊತ್ತದ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. ಗ್ರಾ.ಪಂ.ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಹಾನಿಗೀಡಾದ ಮನೆಗಳನ್ನೂ ಅವರು ವೀಕ್ಷಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಕೋಟೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗಣೇಶ್ ಕುಮಾರ್ ಮಟ್ಟು, ಮಾಜಿ ಗ್ರಾ.ಪಂ. ಸದಸ್ಯ ರತ್ನಾಕರ ಕೋಟ್ಯಾನ್, ಕಾಪು ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮಟ್ಟು, ಕುರ್ಕಾಲ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕುರ್ಕಾಲು, ಪಕ್ಷದ ಪ್ರಮುಖರಾದ ನಾಗರಾಜ್ ಮೆಂಡನ್, ಹರ್ಷಿತ್ ಸನಿಲ್, ಯೋಗೀಶ್ ಕುಮಾರ್, ಸಂತೋಷ ಮೆಂಡನ್, ಉತ್ತಮ್ ಕೋಟ್ಯಾನ್, ಅಶೋಕ್, ಮಟ್ಟುಗುಳ್ಳ ಬೆಳೆಗಾರರಾದ ಜಯೇಂದ್ರ, ಹರೀಶ್ ಮಟ್ಟು, ಸಾಧು, ಜಯಕರ್, ಜಗದೀಶ್, ಶಾರದಾ, ಪ್ರದೀಪ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.