Advertisement
ಸುದ್ದಿಗಾರರ ಜತೆ ಮಾತನಾಡಿ, ನಾನು ನನ್ನ ತಾಯಿಗೆ ಒಬ್ಬನೇ ಮಗ. ಸಿ.ಟಿ.ರವಿ ನನ್ನ ತಾಯಿ ಬಗ್ಗೆ ಈ ರೀತಿ ಅಶ್ಲೀಲ ಪದ ಬಳಕೆ ಮಾಡಿದಾಗ ಸಹಿಸಿಕೊಳ್ಳಲು ಆಗಲಿಲ್ಲ. ನಾನೂ ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಆಗ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಕಾನೂನು ಮೂಲಕ ಉತ್ತರ ಕೊಡಬೇಕು ಎಂದು ಆಲೋಚನೆ ಮಾಡಿದೆ. ಬಿಜೆಪಿ ಮುಖಂಡರು ತಮ್ಮ ಅಕ್ಕ-ತಂಗಿಯರಿಗೆ ಇಂತಹ ಪದ ಬಳಕೆ ಮಾಡಿದ್ದರೆ ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತಿದ್ದರು, ಏನು ಕ್ರಮ ಜರುಗಿಸುತ್ತಿದ್ದರು. ನಮ್ಮ ತಾಯಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸತತ ಎರಡು ಬಾರಿ ಗೆದ್ದಿದ್ದಾರೆ. ಕ್ಷೇತ್ರದ ಪ್ರತಿಯೊಂದು ಮನೆಯವರು ತಮ್ಮ ಮನೆ ಮಗಳ ರೀತಿಯಲ್ಲಿ ನೋಡುತ್ತಾರೆ. ಇಂತಹ ಹೇಳಿಕೆಯಿಂದ ಪ್ರತಿಯೊಬ್ಬರಿಗೂ ಬೇಸರವಾಗಿದೆ ಎಂದರು. Advertisement
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
10:04 PM Dec 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.