Advertisement

Triple talaq ಮತ್ತೆ ತರುತ್ತೀರಾ: ರಾಹುಲ್‌ಗೆ ಅಮಿತ್‌ ಶಾ ಪ್ರಶ್ನೆ

12:11 AM May 13, 2024 | Team Udayavani |

ರಾಯ್‌ಬರೇಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪರ್ಧಿಸಿಸುವ ರಾಯ್‌ಬರೇಲಿಯಲ್ಲಿ ಪ್ರಚಾರ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ 5 ಪ್ರಶ್ನೆಗಳನ್ನು ಕೇಳಿದ್ದಾರೆ.

Advertisement

ನೀವು ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್‌ ಜಾರಿ ಮಾಡುತ್ತೀರಾ? ಮುಸ್ಲಿಂ ವೈಯಕ್ತಿಕ ಕಾನೂನನ್ನು ಆಚರಣೆಗೆ ತರುತ್ತೀರಾ? ಸರ್ಜಿಕಲ್‌ ಸ್ಟ್ರೈಕ್‌ಗೆ ಬೆಂಬಲ ನೀಡುತ್ತೀರೋ ಇಲ್ಲವೋ? ರಾಮಮಂದಿರಕ್ಕೆ ಏಕೆ ಹೋಗಲಿಲ್ಲ? 370ನೇ ವಿಧಿಯನ್ನು ಮರುಜಾರಿ ಮಾಡುತ್ತೀರಾ? ರಾಹುಲ್‌ ಬಾಬಾ ಈ ಎಲ್ಲ ಪ್ರಶ್ನೆಗಳಿಗೆ ನೀವು ಉತ್ತರಿಸಿ ಎಂದು ಅಮಿತ್‌ ಶಾ ಹೇಳಿದ್ದಾರೆ. ಇದೇ ವೇಳೆ ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದ ಅವರು, ವರ್ಷಗಳ ಕಾಲ ಗಾಂಧಿ ಕುಟುಂಬವನ್ನು ರಾಯ್‌ಬರೇಲಿಯ ಜನ ಗೆಲ್ಲಿಸಿದ್ದಾರೆ. ಒಮ್ಮೆಯಾದರೂ ಗೆದ್ದ ಬಳಿಕ ಅವರು ಇಲ್ಲಿಗೆ ಬಂದಿದ್ದಾರೆಯೇ? ಏನಾದರೂ ಅಭಿವೃದ್ಧಿ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಪ್ರತಾಪ್‌ಗ್ಢದಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವರು ಅಣು ಬಾಂಬ್‌ಗ ರಾಹುಲ್‌ ಗಾಂಧಿ ಹೆದರಬಹುದು. ಆದರೆ ಬಿಜೆಪಿ ನಾಯಕರಲ್ಲ ಎಂದು ಹೇಳಿದ್ದಾರೆ. ಪಾಕ್‌ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ನಾವದನ್ನು ಪಡೆಯುತ್ತೇವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next